ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಖಂಡನೀಯ: ಸಚಿವೆ ಶಶಿಕಲಾ ‌ಜೊಲ್ಲೆ

ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧ ‌ಮಾಡಲು ಹೊರಟಿರುವ ಕಾಂಗ್ರೆಸ್ ನ ನಡೆ ಖಂಡನೀಯವಾಗಿದೆ ಎಂದು ಬಿಜೆಪಿ ಅಭ್ಯರ್ಥಿ,ಸಚಿವೆ ಶಶಿಕಲಾ ‌ಜೊಲ್ಲೆ ಹೇಳಿದರು.

ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ‌ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇದಕ್ಕೆ ಕೈ ಹಾಕಿರುವುದು ಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಭಾರತ ದೇಶವು‌ ತನ್ನದೇಯಾದ ಸಂಸ್ಕ್ರತಿ, ಸಂಸ್ಕಾರ, ಅಧ್ಯಾತ್ಮಿಕವನ್ನು ಹೊಂದಿರುವ ದೇಶವಾಗಿದೆ.‌ ಬಜರಂಗದಳ ಸಂಘಟನೆಯು‌ ಹಿಂದೂತ್ವವನ್ನು ಉಳಿಸುವ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ನ ನಾಯಕರು ಬಜರಂಗದಳ ಸಂಘಟನೆಯನ್ನು ನಿಷೇದ ಮಾಡಲು ಹೊರಟಿರುವುದು ಎಷ್ಟು ಸೂಕ್ತ. ಬಜರಂಗದಳ ನಿಷೇಧವನ್ನು ಖಂಡಿಸಿ ಇವತ್ತು ನಿಪ್ಪಾಣಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ಸಾಮೂಹಿಕ ಹನುಮಾನ ಚಾಲಿಸ್ ಪಠಣವನ್ನು ಮಾಡುವ ಮೂಲಕ‌ ಬಜರಂಗದಳ ‌ನಿಷೇದ ಮಾಡಲು ಹೊರಟಿರುವ ಕಾಂಗ್ರೆಸ್ ನಡೆಯನ್ನು ಖಂಡಿಸುತ್ತೇವೆ ಎಂದರು.

ಈ ಸಂಧರ್ಭದಲ್ಲಿ ‌ನಿಪ್ಪಾಣಿ ನಗರಸಭೆಯ ಅಧ್ಯಕ್ಷ ಜಯವಂತ ಭಾಟಲೆ, ಬಸವಪ್ರಸಾದ ಜೊಲ್ಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

error: Content is protected !!