ಬಾಗಲಕೋಟೆ: ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದಲ್ಲಿ ನಾಲ್ವರು ವ್ಯಕ್ತಿಗಳ ಭೀಕರ ಕೊಲೆ. ಕಲ್ಲು ಹಾಗೂ ಮಾರಾಕಾಸ್ತ್ರ ಬಳಸಿ ಕೊಲೆ ಮಾಡಿದ ದುಷ್ಕರ್ಮಿಗಳು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮದರಖಂಡಿ ಗ್ರಾಮದಲ್ಲಿ ಘಟನೆ.
ಮಲ್ಲಪ್ಪ (೪೫) ಬಸವರಾಜ್ (೩೭) ಈಶ್ವರ್ (೩೪) ಹನುಮಂತ ೪೭, ಕೊಲೆಯಾದ ದುರ್ದೈವಿಗಳು.
ಕೊಲೆಗೆ ನಿಖರ ಕಾರಣ ತಿಳುದುಬಂದಿಲ್ಲ. ಎರಡು ಕುಟುಂಬಗಳ ಮಧ್ಯೆ ಇದ್ದ ಆಸ್ತಿ ವಿವಾದದ ಘರ್ಷಣೆಗೆ ಕೊಲೆಯಾಗಿದೆ ಎಂಬ ಶಂಕೆ
ಮುದರಡ್ಡಿ ಕುಟುಂಬದ ನಾಲ್ಕು ಜನರ ಹತ್ಯೆ. ಆಸ್ತಿವಿವಾದ ಹಿನ್ನೆಯಲ್ಲಿ ನಡೆದ ಹತ್ಯೆ. ಕೊಲೆ ಮಾಡಿರುವ ಆರೋಪಿಗಳು ಪಾರಾರಿಯಾಗಿದ್ದು, ಸ್ಥಳಕ್ಕೆ ಜಮಖಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.