ಕೂಗು ನಿಮ್ಮದು ಧ್ವನಿ ನಮ್ಮದು

ವಿರೋಧಪಕ್ಷ ಸ್ಥಾನ ಉಳಿಸಿಕೊಳ್ಳಲು ಕಾಂಗ್ರೆಸ್ ಹೆಣಗಾಟ; ಬಿ.ವೈ.ವಿಜಯೇಂದ್ರ ವ್ಯಂಗ್ಯ

ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನಲ್ಲಿ ಬಿಜೆಪಿಯನ್ನು ಈ ಹಿಂದಿನಿಂದಲೂ ಹಲವಾರು ಹೋರಾಟದ ಮುಖಾಂತರ ಸಂಘಟನೆ ಮಾಡಲಾಗಿದೆ. ಈಗ ಯುವಜನಾಂಗವನ್ನು ಸೇರಿಸಿಕೊಂಡು ಇನ್ನೂ ಹೆಚ್ಚಿನ ಸಂಘಟನೆ ಮಾಡುತ್ತಿರುವದು ಪಕ್ಷಕ್ಕೆ ಆನೆ ಬಲಬಂದಂತಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಪಟ್ಟಣದ ಹೊರವಲಯದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಪಕ್ಷದ ಶಕ್ತಿಕೇಂದ್ರದ ಸಂಘಟನಾತ್ಮಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

30-40 ವಷÜರ್‍ಗಳಿಂದ ಯಡಿಯೂರಪ್ಪನವರು ಪಾದಯಾತ್ರೆ, ಹಲವಾರು ಹೋರಾಟ ಮಾಡಿ ಸಂಘಟನೆ ಮಾಡಿದ್ದಾರೆ. ಈಗ ಪಕ್ಷ ಸಂಘಟನೆ ಮಾಡಿ ಅಭಿವೃದ್ಧಿಯ ಬೀಜ ಬಿತ್ತಿದ್ದಾರೆ. ಆದರೆ ಅಭಿವೃದ್ಧಿ ಶಿಕಾರಿಪುರಕ್ಕೆ ಸೀಮಿತವಾಗದೇ ಮುಖ್ಯಮಂತ್ರಿ ಇದ್ದಾಗ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಮಾಡಿ ಎಲ್ಲ ಜನಾಂಗಗಳನ್ನು ಸಮನಾಗಿ ನೋಡಿದ್ದಾರೆ ಎಂದು ಹೇಳಿದರು.

ಶಿಕಾರಿಪುರ ಮಾದರಿ ತಾಲೂಕನ್ನಾಗಿ ಮಾಡಲು ಯಡಿಯೂರಪ್ಪನವರು ಹಾಗೂ ಸಂಸದ ರಾಘಣ್ಣನವರು ಸಂಪೂರ್ಣ ಶ್ರಮ ಹಾಕಿದ್ದಾರೆ. ಜೊತೆಗೆ ತಾಲೂಕಿನಲ್ಲಿ ಹಸಿರು ಕ್ರಾಂತಿ ಮಾಡಲು ನೀರಾವರಿ, ಏತ ನೀರಾವರಿಯಂತಹ ಯೋಜನೆಗಳನ್ನು ತಾಲೂಕಲ್ಲಿ ಮಾತ್ರವಲ್ಲದೇ ಈಡೀ ರಾಜ್ಯದಲ್ಲಿ ಇಂತಹ ಕ್ರಾಂತಿ ಮಾಡಿ ರಾಜ್ಯದ ಜನರ ಮನಸ್ಸಿನಲ್ಲಿ ಉಳಿದ್ದಾರೆ ಎಂದು ಹೇಳಿದರು. ರಾಜ್ಯದಲ್ಲಿ ದೇವರಾಜ್‌ ಅರಸರ ನಂತರ ರಾಜ್ಯದಲ್ಲಿ ಎಲ್ಲ ಜಾತಿ ಜನಾಂಗಕ್ಕೆ ಸವಲತ್ತು ನೀಡಿದ ಏಕೈಕ ವ್ಯಕ್ತಿ ಎಂದರೆ ಯಡಿಯೂರಪ್ಪನವರು. ದೇಶದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರ ಮಾಡುತ್ತಿದೆ. ಇಂದು ಕಾಂಗ್ರೆಸ್‌ ಜೋಡೋ ಪಾದಯಾತ್ರೆ ಮಾಡುತ್ತಿದೆ. ಆದರೆ ಅದು ಭಾರತ ಜೋಡೋ ಅಲ್ಲ ಕಾಂಗ್ರೆಸ್‌ ಛೇಡೋ ಯಾತ್ರೆ ಆಗಲಿದೆ. ಎಂದರು.

65 ವಷÜರ್‍ ಆಳಿದ ಕಾಂಗ್ರೆಸ್‌ ಪಕ್ಷ ವಿರೋಧ ಪಕ್ಷದ ಸ್ಥಾನ ಉಳಿಸಿಕೊಳ್ಳಲು ಹೆಣಗಾಡುವ ಸ್ಥಿತಿ ಬಂದೊದಗಿದೆ. ಯಡಿಯೂರಪ್ಪನವರ ಅಭಿವೃದ್ಧಿ ನೋಡಿ ಇಂದು ಇತರ ಪಕ್ಷದ ಮತದಾರರು ಬಿಜೆಪಿಯನ್ನು ಏಕೆ ವಿರೋಧಿಸಬೇಕು ಎನ್ನುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಹೊಸಮತದಾರರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಶಿಕಾರಿಪುರ ತಾಲೂಕಿನಲ್ಲಿ ಚುನಾವಣೆಯನ್ನು ಯಾವರೀತಿ ಎದುರಿಸಬೇಕು ಎಂಬುದನ್ನು ನಮ್ಮ ತಾಲೂಕಿನ ಜನತೆಗೆ ಹೇಳಬೇಕಿಲ್ಲ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಈವರೆಗೆ ಪ್ರಪಂಚದಲ್ಲಿ ಕಮ್ಯುನಿಸ್ಟ್‌ ಪಕ್ಷ ಅತಿಹೆಚ್ಚು ಸದಸ್ಯರನ್ನು ಹೊಂದಿದ್ದ ಪಕ್ಷ ಎಂದು ಹೇಳಲಾಗುತ್ತಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಬಂದಮೇಲೆ 20 ಕೋಟಿಗೂ ಹೆಚ್ಚು ಸದಸ್ಯರನ್ನು ಮಾಡಿ ಪ್ರಪಂಚದ ಅತಿದೊಡ್ಡ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು. ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಕ್ಷೀಣಿಸುತ್ತಿದ್ದು, ಎಲ್ಲ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದೆ. ಬಿಜೆಪಿ ದೇಶದ ಎಲ್ಲ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ದಾಪುಗಾಲುಇಡುತ್ತಿದೆ.

ಪ್ರಾರಂಭದಲ್ಲಿ ಎಂ.ಎಡಿಬಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿ, ಸಂಘಟನೆ ಯಾವರೀತಿ ಮಾಡಬೇಕು ಎಂಬ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಭೆಯ ಅಧ್ಯಕ್ಷತೆಯನ್ನು ತಾಲೂಕ ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್‌ ವಹಿಸಿದ್ದರು. ವೇದಿಕೆ ಮೇಲೆ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷ ಕೆ.ರೇವಣಪ್ಪ, ಅಗಡಿ ಅಶೋಕ, ಭದ್ರಾಪುರದ ಹಾಲಪ್ಪ, ಬಂಗಾರ್‌ ನಾಯಕ್‌, ಸಿದ್ದರಾಮಣ್ಣ, ಸಣ್ಣ ಹನುಮಂತಪ್ಪ, ರವಿ ಶಾನಭೋಗ, ತಡಗಣಿ ಮಂಜಣ್ಣ ಸೇರಿದಂತೆ ಹಲವಾರು ಪ್ರಮುಖರು ವೇದಿಕೆ ಮೇಲಿದ್ದರು.

error: Content is protected !!