ತುಮಕೂರು: ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ಇಡಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ರು.
ಇವತ್ತು ಸಿದ್ದಗಂಗಾ ಮಠದಲ್ಲಿ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಅವರು, ಇವತ್ತು ಸಂಭ್ರಮ ಸಡಗರದ ದಿನ. ವಿಶ್ವದಲ್ಲಿ ಪೂಜಿಸಿದ ಪುಣ್ಯಪುರುಷ, ಆಧುನಿಕ ಬಸವಣ್ಣ ಸಿದ್ದಗಂಗಾ ಶ್ರೀಗಳು. ತ್ರಿವಿಧ ದಾಸೋಹಿಗಳ ಜನ್ಮ ದಿನೋತ್ಸವ. ಸರ್ದಾರ್ ಪಟೇಲ್ ನಂತ್ರ ಧೀಮಂತ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ.
ಇವತ್ತು ಗೃಹ ಸಚಿವರು ಮಾತ್ರ ಆಗಿರದೇ, ಮಠದ ಭಕ್ತರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂದರು. ಅನ್ನದಾಸೋಹ ದೇವರ ಕೆಲಸ ಅಂತ ಭಾವಿಸಿ ಶ್ರೀಗಳು ಕೆಲಸ ಮಾಡಿದ್ರು. ಬಸವಣ್ಣರ ವಚನದಂತೆ ಈ ಶತಮಾನದಲ್ಲಿ ಬಡವರ ಪರ ಕೆಲಸ ಮಾಡಲು ಮಠ ಕಟ್ಟಿದರು. ಮಠಕ್ಕಾಗಿ ಭಿಕ್ಷೆ ಬೇಡಿ ಮಠ ಕಟ್ಟಿದವರು ಶ್ರೀಗಳು. ಶ್ರೀಗಳು ಕರ್ನಾಟಕದ ಆಧ್ಯಾತ್ಮಿಕ ಮೇರು ಪರ್ವತವಾಗಿ ಇದ್ದವರು. ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿ ಆಗೋಕೆ ಶ್ರೀಗಳ ಆಶೀರ್ವಾದ ಕಾರಣ. ಮುಖ್ಯಮಂತ್ರಿ ಅವರು ದಾಸೋಹ ದಿನ ಅಂತ ಘೋಷಣೆ ಮಾಡಿದ್ರು. ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮಿಗಳ ಹೆಸರು ಇಡಬೇಕು ಅಂತ ಇದೇ ವೇಳೆ ಸಿಎಂಗೆ ವಿಜಯೇಂದ್ರ ಮನವಿ ಮಾಡಿದ್ರು.
ಬಿ.ಎಸ್.ಯಡಿಯೂರಪ್ಪ ಅವರು ಜನವರಿ 31ನ್ನು ದಾಸೋಹ ದಿನ ಅಂತ ಘೋಷಣೆ ಮಾಡಬೇಕು ಅಂತ ಸಿಎಂಗೆ ಮನವಿ ಮಾಡಿದರು. ಇದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದರು. ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರದ ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮೀಜಿಗಳ ಹೆಸರು ಇಡುವಂತೆ ಕೇಳಿಕೊಂಡರು. ಇದನ್ನೂ ಕರ್ನಾಟಕ ರತ್ನ, ಬಸವಶ್ರೀ ಪ್ರಶಸ್ತಿ ಪುರಸ್ಕೃತ, 21 ಶತಮಾನದಲ್ಲಿ ಮತ್ತೆ ಅಧುನಿಕ ಬಸವಣ್ಣನಾಗಿ ಶಿವಕುಮಾರ ಸ್ವಾಮೀಜಿಗಳು ಹುಟ್ಟಿ ಬಂದಿದ್ದಾರೆ. ಶ್ರೀಗಳ 115 ನೇ ಜಯಂತೋತ್ಸವದಲ್ಲಿ ಭಾಗಿಯಾಗಿದ್ದೇವೆ ಎಂದರು.