ಕೂಗು ನಿಮ್ಮದು ಧ್ವನಿ ನಮ್ಮದು

ಬಳ್ಳಾರಿಯಲ್ಲಿ ಸೇತುವೆ ದುರಸ್ತಿ ಕಾಮಗಾರಿ ವಿಳಂಬ ವಿರೋಧಿಸಿ ವೇದಾವತಿ ನದಿ ದಡದಲ್ಲೇ ರಾತ್ರಿ ಕಳೆದ ಸಚಿವ ಶ್ರೀರಾಮುಲು

ಬಳ್ಳಾರಿ: ಸೇತುವೆ ದುರಸ್ಥಿ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ವೇದಾವತಿ ನದಿಯ ದಂಡೆಯ ಮೇಲೆ ಸಚಿವ ಶ್ರೀರಾಮುಲು ರಾತ್ರಿ ಇಡೀ ವಾಸ್ತವ್ಯ ಹೂಡಿದ್ದಾರೆ. ಬಳ್ಳಾರಿ ತಾಲೂಕಿನ ಪಿಡಿ ಹಳ್ಳಿ ಬಳಿ ಇರುವ ವೇದಾವತಿ ನದಿ ಸೇತುವೆಯ ಪಿಲ್ಲರ್ ದುರಸ್ಥಿ ಹಿನ್ನೆಲೆಯಲ್ಲಿ ರಾತ್ರಿ ಇಡೀ ಕಾಮಗಾರಿ ಸ್ಥಳದಲ್ಲೇ ಮಲಗಿದ ಸಚಿವ ಶ್ರೀರಾಮುಲು ಇಂದು ಮುಂಜಾನೆ ಅದೇ ನದಿಯಲ್ಲಿ ಸ್ನಾನ ಮಾಡಿದ್ದಾರೆ. ಕಾಲುವೆಗೆ ನೀರು ಹರಿವು ಬಂದ್ ಆದ ಪರಿಣಾಮ ಲಕ್ಷಾಂತರ ಎಕರೆ ಬೆಳೆಗೆ ಹಾನಿಯಾಗುವ ಆತಂಕ ಎದುರಾಗಿತ್ತು.

ಸೇತುವೆ ಪಿಲ್ಲರ್ ಮರು ನಿರ್ಮಾಣ ಕಾಮಗಾರಿ ಮುಗಿಯುವವರೆಗೂ ಕಾಲುವೆಗೆ ನೀರು ಹರಿಯುವುದನ್ನು ಅಧಿಕಾರಿಗಳು ಬಂದ್ ಮಾಡಿದ್ದರು. ಅಲ್ಲದೇ ಪಿಲ್ಲರ್ ನಿರ್ಮಣ ಕಾಮಗಾರಿ ವಿಳಂಬ ಹಿನ್ನಲೆ ರೈತರ ಆಕ್ರೋಶ ಭುಗಿಲೆದ್ದಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಸಚಿವ ಶ್ರೀರಾಮುಲು ನಿನ್ನೆ ಮಧ್ಯಾಹ್ನ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ, ಕಾಮಗಾರಿ ಪೂರ್ಣ ಮುಗಿಯೋವರೆಗೂ ಕಾಮಗಾರಿ ಸ್ಥಳದಲ್ಲೇ ಇರಲು ನಿರ್ಧಾರ ಮಾಡಿದ್ದರು.

error: Content is protected !!