ಕೂಗು ನಿಮ್ಮದು ಧ್ವನಿ ನಮ್ಮದು

ಪಕ್ಷದ ಮೇಲೆ ಮುನಿಸು, ಜಿಲ್ಲಾ ಸಚಿವರ ಸಭೆಗೆ ಶಾಸಕರ ಗೈರು

ಚಿತ್ರದುರ್ಗ: ನೂತನ ಸಾರಿಗೆ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಿದ ಬಳಿಕ ಶ್ರೀರಾಮುಲು ಅವರು ಮೊದಲ ಸಲ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋರೊನಾ ೩ ನೇ ಅಲೆ ಮತ್ತು ನೆರೆ ಹಾವಳಿ ಬಗ್ಗೆ ಸಭೆಯನ್ನು ನಡೆಸಿದ್ರು. ಇನ್ನೂ ಈ ಸಭೆಗೆ ಜಿಲ್ಲೆಯ ನಾಲ್ಕು ಜನ BJP ಶಾಸಕರು ಗೈರಾಗುವ ಮೂಲಕ ತಮ್ಮ ಅಸಮಾಧಾನ ಇನ್ನೂ ತಣಿದಿಲ್ಲ ಎಂಬುದನ್ನು ಎತ್ತಿ ಹಿಡಿದಿದ್ದಾರೆ.

ಇನ್ನೂ ಜಿಲ್ಲಾ ಉಸ್ತುವಾರಿ ಸಚಿವ B.ಶ್ರೀರಾಮುಲು ಅವರು ಜಿಲ್ಲಾಧಿಕಾರಿಗಳ ಜೊತೆಗಿನ ಸಭೆ ಇಂದು ಮುಂಜಾನೆ ನಿಗದಿಯಾಗಿತ್ತು. ಆದ್ರೆ ಶಿಷ್ಟಾಚಾರದಂತೆ ಈ ಮಾಹಿತಿಯು ಜಿಲ್ಲೆಯ ನಾಲ್ಕು ಮಂದಿ BJP ಶಾಸಕರು ಸೇರಿದಂತೆ ಎಲ್ಲಾ ಶಾಸಕರಿಗೂ ಮಾಹಿತಿಯು ರವಾನೆಯಾಗಿತ್ತು. ಇನ್ನೂ ನಿಗದಿಯಂತೆ ಮಧ್ಯಾಹ್ನ ೧೨.೩೦ಕ್ಕೆ ಸಭೆ ಆರಂಭಗೊಂಡು ೨ಗಂಟೆಗೆ ಸಭೆ ಮುಕ್ತಾಯವಾದ್ರು ಕೂಡ BJP ಹಿರಿಯ ಶಾಸಕ G.H ತಿಪ್ಪಾರೆಡ್ಡಿ ಸೇರಿದಂತೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮತ್ತು ಹೊಸದುರ್ಗದ ಗೂಳಿಹಟ್ಟಿ D. ಶೇಖರ್, ಹಾಗೂ ಹೊಳಲ್ಕೆರೆಯ M.ಚಂದ್ರಪ್ಪ ಸೇರಿದಂತೆ ಯಾವೊಬ್ಬ ಶಾಸಕರು ಸಹ ಈ ಸಭೆಯಲ್ಲಿ ಭಾಗವಹಿಸದೆ ಪಕ್ಷದ ಮೇಲಿನ ಅಸಮಾಧಾನವನ್ನು ಮತ್ತೊಮ್ಮೆ ತೋರಿಸಿದ್ದಾರೆ.

ಜೊತೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯ ಶಾಸಕ G.H.ತಿಪ್ಪಾರೆಡ್ಡಿ ಅವರು ಈ ಬಾರಿಯೂ ಸಚಿವ ಸ್ಥಾನ ಸಿಗಲಿದೆ ಎಂಬ ಆಸೆಯಿಂದ ದೆಹಲಿಯಿಂದ ಕ್ಷೇತ್ರಕ್ಕೆ ಬಂದಿದ್ದರಾದ್ರು, ಕೊನೆಯ ಕ್ಷಣದಲ್ಲಿ ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲ. ಇನ್ನೂ ಮತ್ತೊಂದು ಕಡೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಕೂಡಾ ಮಹಿಳಾ ಕೋಟಾ ದಲ್ಲಿ ತಮಗೆ ಸಚಿವ ಸ್ಥಾನ ಸಿಗಲಿದೆ ಎಂಬ ಆಸೆಗೆ ಕೊನೆ ಕ್ಷಣದಲ್ಲಿ ನಿರಾಶಿತರಾಗಿದ್ದಾರೆ.

ಇನ್ನೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮತ್ತೆ ಮಂತ್ರಿ ಪಟ್ಟ ಕೊಟ್ಟಿದ್ದನ್ನು ಪೂರ್ಣಿಮಾ ಅವರು ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಇನ್ನೂ ಹಾಗೆಯೇ ಬಿ.ಎಸ್.ಯಡಿಯೂರಪ್ಪನವರಿಗೆ ನಿಷ್ಠೆಯಿಂದ ಇದ್ದಂತಹ ಬಿಎಸ್ವೈ ಆಪ್ತ M.ಚಂದ್ರಪ್ಪ ಮತ್ತು ಗೂಳಿಹಟ್ಟಿ D.ಶೇಖರ್ ಕೂಡ ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದು ಅವರಿಗೂ ಸಹ ಸಚಿವ ಸ್ಥಾನ ಸಿಗದೆ ಇರುವ ಕಾರಣ ಬಹಿರಂಗವಾಗಿಯೇ ಪಕ್ಷ ಮತ್ತು ನಾಯಕರ ವಿರುದ್ಧವಾಗಿ ತಮ್ಮ ಅಸಮಧಾನವನ್ನು ಹೊರಹಾಕಿದ್ರು.

ಜೊತೆಗೆ ಸಂಪುಟ ರಚನೆಯ ನಂತರ ಎಲ್ಲಾ ಶಾಸಕರ ಅಸಮಧಾನವನ್ನು ತಣಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಹೇಳಿಕೆಯನ್ನು ನೋಡಿ ರಾಜ್ಯದ ಜನರಲ್ಲಿ ಎಲ್ಲವೂ ಸರಿಯಾಗಿದೆ ಎಂದು ತಿಳಿದಿದ್ದರು. ಆದರೆ ಇಂದಿನ ಜಿಲ್ಲಾ ಉಸ್ತುವಾರಿ ಸಚಿವರ ಸಭೆಗೆ ಯಾವೊಬ್ಬ ಶಾಸಕರು ಹಾಜರಾಗದೆ ಇರುವುದನ್ನು ಕಂಡಾಗ BJP ಶಾಸಕರ ಅಸಮಧಾನ ಇನ್ನೂ ಕೂಡ ಶಮನವಾಗಿಲ್ಲಾ ಎಂಬ ಮಾತುಗಳು ಎಲ್ಲಡೆ ಕೇಳಿಬಂದಿವೆ

error: Content is protected !!