ಕೂಗು ನಿಮ್ಮದು ಧ್ವನಿ ನಮ್ಮದು

ಸಿಎಂ ಬೊಮ್ಮಾಯಿಗೆ ಕೈ ಕೋಟ್ರಾ ಬಿಎಸ್‍ವೈ ,ಸಹಾಯಕ್ಕೆ ಹೈಕಮಾಂಡ್‍ಗೆ ಸಿಎಂ ಮೊರೆ

ಬೆಂಗಳೂರು: ರಾಜ್ಯ BJP ಯಲ್ಲಿ ಈಗ ಸಂದಿಗ್ಧ ಪರಿಸ್ಥಿತಿಯು ಎದುರಾಗಿದೆ. ಇನ್ನೂ ಈ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿಯವರು ಅಸಮಾಧಾನಿತರ ವಿಚಾರದಲ್ಲಿ ದಾರಿ ಕಾಣದಂತಾದ್ರಾ ಎಂಬ ಪ್ರಶ್ನೆಯೊಂದು ಎಲ್ಲಡೆ ಮೂಡಿದೆ.

ಇನ್ನೂ ಅಸಮಾಧಾನ ತಣಿಸಲು ಸಿಎಂ ಹೈಕಮಾಂಡ್‍ಗೆ ಮೊರೆ ಹೋಗಲಿದ್ದು, ಜೊತೆಗೆ ಮುಂದಿನ ವಾರ ದೆಹಲಿಗೆ ದೌಡಾಯಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನೂ ಇದರ ಮದ್ಯ ಹೈಕಮಾಂಡ್ ನಡೆ ಏನು? ಮತ್ತು ಬೇಸರಗೊಂಡಿರುವರಿಗೆ ಗುಡ್ ನ್ಯೂಸಾ ಕೋಡ್ತಾರಾ? ಇಲ್ಲಾ ಸಾಂತ್ವನ ಹೇಳ್ತಾರಾ ಎಂಬ ಕುತೂಹಲ ಎಲ್ಲೆಡೆ ಹುಟ್ಟಿದೆ. ಜೊತೆಗೆ ಖಾತೆ ಬದಲಾವಣೆಗೆ ಆನಂದ್ ಸಿಂಗ್, MTB ನಾಗರಾಜ್ ತೀವ್ರ ಪಟ್ಟು ಹಿಡಿದ್ರು. ಜೊತೆಗೆ ಶ್ರೀರಾಮುಲು ಅವರು ಸಹ ಉಪಮುಖ್ಯಮಂತ್ರಿ ಸ್ಥಾನ ಸಿಗದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ರು.

ಇನ್ನೂ ಹೀಗಾಗಿ ಸಚಿವರು ಬಿ.ಎಸ್.ಯಡಿಯೂರಪ್ಪನವರು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಭೇಟಿ ಮಾಡದೇ ಏಕಾಂಗಿಯಾಗಿದ್ದಾರೆ. ಜೊತೆಗೆ ಮುಖ್ಯಮಂತ್ರಿ, ಇಕ್ಕಟ್ಟಿನಲ್ಲಿದ್ರು ಬಿಎಸ್ವೈ ಅವರು ಸಹ ತಮ್ಮ ಪಾಡಿಗೆ ತಾವಿದ್ದಾರೆ. ಇನ್ನೂ ಇದೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ಈಗ ಹೈಕಮಾಂಡ್ ಮೊರೆ ಹೋಗೋದೊಂದೇ ದಾರಿ ಉಳಿದಿದೆ.

ಇನ್ನೂ ಹಾಗಾಗಿ ಮುಂದಿನ ವಾರ ವರಿಷ್ಠರ ಭೇಟಿಯಾಗಲು ದೆಹಲಿಗೆ ದೌಡಾಯಿಸಲಿದ್ದ, ಜೊತೆಗೆ ಈಗಾಗಲೇ ಅಸಮಾಧಾನಿತರ ವಿಚಾರವನ್ನು ಸಿಎಂ ಬಸಬರಾಜ್ ಬೊಮ್ಮಾಯಿಯವರು ವರಿಷ್ಠರ ಗಮನಕ್ಕೆ ತಂದಿದ್ರಾ. ಜೊತೆಗೆ ದೆಹಲಿಗೆ ದೌಡಾಯಿಸಿ ಪರಿಹಾರ ಸೂಚಿಸುವಂತೆ ಮನವಿಯನ್ನು ಮಾಡುತ್ತಾರಾ. ಇದರ ಮದ್ಯೆ ಬಿರುಗಾಳಿ ತರುವ ಅಪಾಯ ತಪ್ಪಿಸುತ್ತಾ ಹೈಕಮಾಂಡ್ ಸೂತ್ರ? ಅಥವಾ ಸಚಿವ ಸ್ಥಾನ ವಂಚಿತರು, ನಿರ್ದಿಷ್ಟ ಖಾತೆ ವಂಚಿತರಿಗೆ ಸಿಗುತ್ತಾ ನ್ಯಾಯ ಎಂಬುದನ್ನು ನಾವು ನೀವೆಲ್ಲಾ ಕಾದು ನೋಡಬೇಕಿದೆ.

error: Content is protected !!