ಕೂಗು ನಿಮ್ಮದು ಧ್ವನಿ ನಮ್ಮದು

ಮಾಜಿ ಸಿಎಂ ಬಿಎಸ್ವೈ ಸೂಕ್ತ ಸ್ಥಾನಮಾನ ಕಲ್ಪಿಸಿಕೊಡುವ ಬಗ್ಗೆ ಹೇಳಿದ್ದಾರೆ: ಬಿ.ಸಿ ಪಾಟೀಲ್

ಹಾವೇರಿ: ಬಿಎಸ್ವೈ ಸೂಕ್ತ ಸ್ಥಾನವನ್ನು ಕೊಡುವ ಬಗ್ಗೆ ಹೇಳಿದ್ದಾರೆ. ಜೊತೆಗೆ BJP ಪಕ್ಷ ಇಲ್ಲಿಯವರೆಗೂ ನನ್ನನ್ನು ಚೆನ್ನಾಗಿ ನಡೆಸಿಕೊಂಡು ಬಂದಿದೆ. ಜೊತೆಗೆ ಈಗಲೂ ಸಹ ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ನನಗೆ ಇದೆ ಎಂದು ಹಿರೇಕೆರೂರಿನ ಶಾಸಕ B.C.ಪಾಟೀಲ್ ಹೇಳಿದ್ರು. ಇನ್ನೂ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ B.C.ಪಾಟೀಲ್, ಹಿರಿಯರ ಬಗ್ಗೆ ನಾನು ಮಾತನಾಡುವುದಿಲ್ಲ.

ಜೊತೆಗೆ ಕೆಲವು ಜನರಿಗೆ ಕೆಲವು ಕಡೆ ಅಸಮಾಧಾನ ಸಹಜ, ಜೊತೆಗೆ ಹಿರಿಯರು ಅದನ್ನು ಸರಿಪಡಿಸುತ್ತಾರೆ. ಇನ್ನೂ ಏನ್ ಬರುತ್ತೊ , ಬಂದಾಗ ನೋಡೋಣ ಎಂದಿದ್ರು.
ಇನ್ನೂ ಮನುಷ್ಯ ಆಶಾದಾಯಕವಾಗಿರಬೇಕು. ಜೊತೆಗೆ ಯಾವುದನ್ನು ಊಹೆಯ ಮೇಲೆ ಮಾತಾಡುವುದು ಬೇಡ. ಇನ್ನೂ ಸರ್ಕಾರ ಬಂದು ಈಗಾಗಲೇ ಒಂದು ವಾರ ಆಗಿದೆ. ಜೊತೆಗೆ ಕೋರೊನಾ ಮತ್ತು ನೆರೆ ಇರುವ ಸಂದರ್ಭದಲ್ಲಿ ಕೂಡಲೇ ಸಿಎಂ ರಚನೆ ಮಾಡಬೇಕು ಎಂದು ಎಲ್ಲರ ಒತ್ತಾಯವಿತ್ತು.

ಇನ್ನೂ ರಾಜ್ಯದ ಭವಿಷ್ಯ ನೋಡ ಬೇಕಾದವರೆ ಪ್ರಜೆಗಳೇ ಹೊರತು ಸ್ವಾಮಿಗಳು, ಧರ್ಮದರ್ಶಿಗಳಲ್ಲ. ನನಗೂ ಒಬ್ಬ ದೊಡ್ಡ ಗುರುಗಳು ರಾಜಕೀಯಕ್ಕೆ ನೀವು ಬರಬೇಡಿ ಎಂದಿದ್ದರು. ಆದರೆ ನಾನು ರಾಜಕೀಯಕ್ಕೆ ಬಂದೆ ಎಂದು ಬಿ.ಸಿ .ಪಾಟೀಲ್ ವ್ಯಂಗ್ಯ ಮಾಡಿದ್ದಾರೆ.
ಇನ್ನೂ ಮಾಜಿ ಪ್ರಧಾನಿ ದೇವೇಗೌಡ ಅವರು ವಯಸ್ಸಿನಲ್ಲಿ ಹಿರಿಯರು, ಬಹಳ ಅನುಭವಿಗಳು, ಇನ್ನೂ ಇವರು ಹಿರಿಯರು ಎನ್ನುವ ಗೌರವಕ್ಕೆ ಹೋಗಿ ಭೇಟಿ ಆಗಿದ್ದಾರೆ. ಜೊತೆಗೆ ನಾನಿನ್ನೂ ಯಾವುದೇ ನಿರೀಕ್ಷೆ ಮಾಡಿಲ್ಲ. ಹಾಗೂ ಯಾವ ಖಾತೆ ಕೊಟ್ಟರೂ ನಾನು ನಿಭಾಯಿಸುವ ಶಕ್ತಿ ಇದೆ. ಜೊತೆಗೆ ಅಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಇನ್ನೂ ನನಗೆ ಯಾವ ಖಾತೆ ಕೊಟ್ಟರು ನಾನು ಒಳ್ಳೆಯ ರೀತಿಯಲ್ಲಿ ನಿಭಾಯಿಸುತ್ತೇನೆ. ಎಂದು ಬಿ.ಸಿ ಪಾಟೀಲ್ ಹೇಳಿದ್ದಾರೆ.

error: Content is protected !!