ಬೆಂಗಳೂರು: ನಮ್ಮನ್ನು ವಲಸಿಗರು ಎಂದು ಕರೆಯಬೇಡಿ. ವಲಸಿಗ, ಬಾಂಬೆ ಬಾಯ್ಸ್ ಎನ್ನುವ ಶಬ್ದ ಬಿಡ್ರಿ ಎಂದು ಮಾಜಿ ಸಚಿವ ಬಿ. ಸಿ ಪಾಟೀಲ್ ವಲಸಿಗರು ಎಂದು ಕರೆಯುವವರ ವಿರುದ್ಧ ಕಿಡಿಕಾರಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನಂತರ ಮಾತನಾಡಿದ ಅವರು, ನಾವು ಬಿಜೆಪಿ ಪಕ್ಷಕ್ಕೆ ಬಂದು ಗೆದ್ದು ಮಂತ್ರಿ ಆಗಿದ್ದೇವೆ. ಹೀಗಿದ್ದರೂ ನೀವು ನಮ್ಮನ್ನು ವಲಸಿಗರು ಎಂದು ಕರೆಯೋದು ಬಿಡಲ್ವ ಎಂದಿದ್ದಾರೆ. ಇನ್ನು ಸಂಪುಟ ರಚನೆ ಬಗ್ಗೆಯಾಗಲಿ, ಈ ಮೊದಲು ಇದ್ದ ಇಲಾಖೆ ಬಗ್ಗೆಯಾಗಲಿ ನಾನು ಚರ್ಚೆ ಮಾಡಿಲ್ಲ. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡ್ತೇನೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ. ಅವರ ಬಗ್ಗೆ ಗೊತ್ತಿದೆ, ಅವರೇ ಸಚಿವ ಸಂಪುಟ ಬಗ್ಗೆ ತೀರ್ಮಾನ ಮಾಡ್ತಾರೆ ಎಂದರು.