ತುಮಕೂರು: ಸುರೇಶ್ ಕುಮಾರ್ರಷ್ಟು ಶಕ್ತಿ, ಸಾಮರ್ಥ್ಯವು ನನಗಿಲ್ಲ. ಅವರ ಅನುಭವ ಮತ್ತು ಹೋರಾಟದ ಮುಂದೆ ನಾನು ಗೌಣ ಎಂದು ನೂತನ ಸಚಿವರಾದ B.C ನಾಗೇಶ್ ಅವರು ಹೇಳಿದ್ರು. ಇನ್ನೂ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಮಾದ್ಯಮದವರೊಂದಿಗೆ ಮಾತನಾಡಿರುವ ಅವರು, ಜಾತಿ ಕೋಟಾ BJP ಅಲ್ಲಿ ಇಲ್ಲ. ಜೊತೆಗೆ ಜಾತಿ ಕೋಟಾದ ಅಡಿಯಲ್ಲಿ ನನಗೆ ಸಚಿವ ಸ್ಥಾನವನ್ನು ಕೊಟ್ಟಿಲ್ಲ. ಈ ಜಾತಿ ಲೆಕ್ಕಾಚಾರ ಕೇವಲ ನಿಮ್ಮ ಸುದ್ದಿಗಾರರ ಸೃಷ್ಟಿ ಎಂದು ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ.
ಇನ್ನೂ ಕಾಂಗ್ರೆಸ್ ನವರು ಜಾತಿ ಆಧಾರಿತ ರಾಜಕಾರಣವನ್ನು ಮಾಡುತ್ತಾರೆ. ಎಂದಿದ್ದಾರೆ ಜೊತೆಗೆ ಪರಿಶ್ರಮದಿಂದ ಬೆಳೆದ ಕಾರ್ಯಕರ್ತರಿಗೆ ಪಕ್ಷ ಹೊಸ ಜವಾಬ್ದಾರಿಯನ್ನು ಕೊಟ್ಟಿದೆ. ಹಾಗೂ ಹಗಲು ರಾತ್ರಿ ಕೆಲಸ ಮಾಡಿ ವರಿಷ್ಠರ ನಿರೀಕ್ಷೆಯನ್ನು ಪೂರ್ಣ ಮಾಡುತ್ತೇನೆ. ಜೊತೆಗೆ ನಾನು ಮಂತ್ರಿಗಿರಿಯನ್ನ ನಿರೀಕ್ಷಿಸಿರಲಿಲ್ಲ. ಆದ್ರು ನನ್ನ ಪಕ್ಷ ನನಗೆ ಜವಾಬ್ದಾರಿ ನೀಡಿದೆ. ಹಾಗೆಯೇ ನನಗೆ ಯಾವ ಖಾತೆ ಕೊಟ್ಟರೂ ನಾನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು B.C ನಾಗೇಶ್ ಅವರು ತಿಳಿಸಿದ್ರು.