ಕೂಗು ನಿಮ್ಮದು ಧ್ವನಿ ನಮ್ಮದು

ಅಥಣಿ ಅಗ್ನಿಶಾಮಕ ಕಚೇರಿ ಇದೀಗ ಬಾರ್ & ರೆಸ್ಟೋರೆಂಟ್..!? ನೀವೇ ನೋಡಿ

ಬೆಳಗಾವಿ: ಸರ್ಕಾರಿ ಕಚೇರಿ ಆವರಣವನ್ನೆ ಅಲ್ಲಿನ ಸಿಬ್ಬಂದಿ ಬಾರ್ ಅಂಡ್ ರೆಸ್ಟೋರೆಂಟ್ ಮಾಡಿಕೊಂಡ ಘಟನೆಯೊಂದು ಬೆಳಗಾವಿ ಜಿಲ್ಲೆಯ ಅಥಣಿಯ ಅಗ್ನಿಶಾಮಕ ದಳದ ಠಾಣೆಯಲ್ಲಿ ನಡೆದಿದೆ.

https://youtu.be/aCqKJZv2DiQ

ಅಥಣಿ ಪಟ್ಟಣದ ಮಧ್ಯ ಭಾಗದಲ್ಲಿ ಇರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಠಾಣೆಯ ಆವರಣದಲ್ಲಿ ಹಾಡಹಗಲೇ ಕರ್ತವ್ಯದ ವೇಳೆ ಗುಂಡು ತುಂಡಿನ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಸರ್ಕಾರದ ಕೆಲಸ ದೇವರ ಕೆಲಸ ಅಂತ ಹೇಳ್ತಾರೆ. ಆದ್ರೆ ಇದ್ಯಾವುದು ಅಥಣಿ ಅಗ್ನಿಶಾಮಕ ಸಿಬ್ಬಂದಿಗಳಿಗೆ ಅನ್ವಯಿಸುವುದಿಲ್ಲವೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇನ್ನೂ ಮಾದ್ಯಮದವರು ಈ ದೃಶ್ಯವನ್ನ ಚಿತ್ರೀಕರಿಸಲು ಮುಂದಾಗುತ್ತಿದ್ದಂತೆ ಕ್ಯಾಮೆರಾ ಕಂಡ ಸಿಬ್ಬಂದಿ ತುಂಡು ಬಿಟ್ಟು ಗುಂಡು ಮುಚ್ಚಿಡಲು ಪ್ರಯತ್ನ ಮಾಡಿ ಏನು ಇಲ್ಲಾ ಊಟಾ ಮಾಡ್ತಾ ಇದ್ದಿವೆ ಅಷ್ಟೇ ಎಂದು ಸಮಾಜಾಯಿಸಿ ನೀಡಲು ಮುಂದಾದರು.

ಅಥಣಿ ತಾಲೂಕಿನಲ್ಲಿ ಆಕಸ್ಮಿಕವಾಗಿ ಏನಾದರು ಅಗ್ನಿ ಅವಘಡ ಸಂಭವಿಸಿದ್ದೆ ಆದಲ್ಲಿ ಅಗ್ನಿ ನಂದಿಸಲು ಸಿಬ್ಬಂದಿಗಳು ಬರುತ್ತಾರೆಂಬ ವಿಶ್ವಾಸದಲ್ಲಿರುವ ಜನರ ಗತಿ ಅದೋ ಗತಿ ಎನ್ನುವಂತಾಗಿದ್ದು, ತಕ್ಷಣ ಸಂಬಂಧಿಸಿದ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಇಲಾಖೆಯ ಘನತೆ ಕಾಪಾಡಬೇಕಿದೆ.

error: Content is protected !!