ನ್ಯಾಯದ ದೇವರು ಶನಿದೇವ ಜೂನ್ 17ರಂದು ಕುಂಭ ರಾಶಿಯಲ್ಲಿ ಸಂಚರಿಸಲಿದ್ದಾರೆ. ನವೆಂಬರ್ 4ರವರೆಗೆ ಅವರು ಇದೇ ಸ್ಥಿತಿಯಲ್ಲಿರುತ್ತಾರೆ. ಈ ಸಮಯದಲ್ಲಿ ಕೆಲವು ರಾಶಿಗಳಿಗೆ ಶುಭವಾಗಿರುತ್ತವೆ ಮತ್ತು ಕೆಲವು ಅಶುಭವಾಗಿರುತ್ತವೆ. ಶನಿದೇವನ ಹಿಮ್ಮೆಟ್ಟುವಿಕೆಯು 3 ರಾಶಿಗಳಿಗೆ ಒಳ್ಳೆಯ ಸುದ್ದಿಯನ್ನು ತರಬಹುದು. ಇವರ ಪ್ರಗತಿಯ ಸಾಧ್ಯತೆಗಳಿವೆ ಮತ್ತು ಅದೃಷ್ಟದ ಸಹಾಯದಿಂದ ಪ್ರತಿಯೊಂದು ಕೆಲಸಲ್ಲಿಯೂ ಯಶಸ್ಸು ಸಿಗಲಿದೆ. ಬನ್ನಿಈ ರಾಶಿಗಳ ಬಗ್ಗೆ ತಿಳಿಯಿರಿ.
ತುಲಾ ರಾಶಿ: ತುಲಾ ರಾಶಿಯ ಜನರಿಗೆ ಬಡ್ತಿ ಸಿಗಲಿದೆ. ಶನಿದೇವನು ಅವರಿಗೆ ಹಠಾತ್ ಒಳ್ಳೆಯ ಸುದ್ದಿ ನೀಡಲಿದ್ದಾನೆ. ಕಚೇರಿಯಲ್ಲಿ ಕೆಲಸ ಮಾಡುವಾಗ ಫಲಿತಾಂಶದ ಮೇಲೆ ಹೆಚ್ಚು ಗಮನ ಹರಿಸಬೇಕು. ಕಚೇರಿಯಲ್ಲಿ ಅನಾವಶ್ಯಕವಾಗಿ ಮಾತನಾಡುವುದು ಅಥವಾ ಸಮಯ ವ್ಯರ್ಥ ಮಾಡುವುದು ಅಪ್ಪಿತಪ್ಪಿಯೂ ಮಾಡಬಾರದು. ಇದು ನಿಮಗೆ ಹಾನಿಯುಂಟು ಮಾಡುತ್ತದೆ. ನೀವು ನಿಮ್ಮ ಉನ್ನತ ಅಧಿಕಾರಿಗಳೊಂದಿಗೆ ಕುಳಿತು ಅವರ ಮಾರ್ಗದರ್ಶನ ಪಡೆಯಬೇಕು, ಜೊತೆಗೆ ನೀವು ಅವರಿಂದ ಜ್ಞಾನ ಪಡೆಯಬೇಕು. ನೀವು ಎಷ್ಟು ಹೆಚ್ಚು ಅಭ್ಯಾಸ ಮಾಡುತ್ತೀರೋ ಅಷ್ಟು ಬೇಗ ನಿಮ್ಮ ಕೆಲಸವನ್ನು ಕರಗತ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಮೋಷನ್ ಮತ್ತು ಇನ್ಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ. ಜೀವನದಲ್ಲಿ ಪ್ರಗತಿಯ ಜೊತೆಗೆ ಲಾಭದ ಬಾಗಿಲುಗಳು ತೆರೆದುಕೊಳ್ಳುತ್ತವೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯ ಜನರು ಕಚೇರಿಯಲ್ಲಿ ಯಾರೊಂದಿಗೂ ವಿವಾದ ಮಾಡಬಾರದು. ಅನಗತ್ಯವಾಗಿ ತೀಕ್ಷ್ಣವಾಗಿ ಮಾತನಾಡಬೇಡಿ. ಜುಲೈ ನಂತರ ವೃತ್ತಿಜೀವನ ಉತ್ತಮವಾಗಿರುತ್ತದೆ. ಆದರೆ ಮನೆ ಮತ್ತು ಕಚೇರಿಯ ನಡುವಿನ ಸಮತೋಲನದಲ್ಲಿ ನೀವು ಹೆಚ್ಚಿನ ಶಕ್ತಿಯನ್ನು ಹಾಕಬೇಕಾಗುತ್ತದೆ.
ಧನು ರಾಶಿ: ಧನು ರಾಶಿಯ ಜನರು ಈ ಅವಧಿಯಲ್ಲಿ ಸಾಕಷ್ಟು ಪ್ರಯಾಣ ಕೈಗೊಳ್ಳಬೇಕಾಗುತ್ತದೆ. ಪ್ರವಾಸೋದ್ಯಮ ಉದ್ಯೋಗಗಳು, ಮಾರ್ಕೆಟಿಂಗ್ ಅಥವಾ ನೆಟ್ವರ್ಕಿಂಗ್ಗೆ ಸಂಬಂಧಿಸಿದ ಜನರಿಗೆ ಶುಭ ಸುದ್ದಿ ಸಿಗಲಿದೆ. ಈ ರಾಶಿಯವರಿಗೆ ಇಲ್ಲಿಯವರೆಗೆ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ಉತ್ತಮ ಫಲಿತಾಂಶ ಸಿಕ್ಕಿರಲಿಲ್ಲ. ಇದೀಗ ಅವರು ಹೆಚ್ಚು ತಾಳ್ಮೆಯಿಂದಿರಬೇಕು ಮತ್ತು ಕೆಲಸ ಮಾಡುವುದನ್ನು ನಿಲ್ಲಿಸಬಾರದು. ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸಿ. ಶನಿದೇವನು ಇದೀಗ ಅವರ ಶ್ರಮದ ಲಾಭವನ್ನು ನೀಡಲಿದ್ದಾನೆ. ನೆಟ್ವರ್ಕ್, ಟ್ರಾವೆಲ್ಸ್ ಮತ್ತು ಒಡಹುಟ್ಟಿದವರ ಮೇಲೆ ಗಮನ ಕೇಂದ್ರೀಕರಿಸಬೇಕು. ಏಕೆಂದರೆ ಶನಿದೇವನು ಅವರ ಮೂಲಕ ಮಾತ್ರ ಪ್ರಯೋಜನಗಳನ್ನು ನೀಡುತ್ತಾನೆ.