ಕೂಗು ನಿಮ್ಮದು ಧ್ವನಿ ನಮ್ಮದು

ಇನ್ನು ಈ ರಾಶಿಯವರದ್ದು ಯಶಸ್ಸಿನ ಹಾದಿ ! ಕೈಯ್ಯಲ್ಲಿ ನಲಿದಾಡುವಳು ಲಕ್ಷ್ಮೀ

ಏಪ್ರಿಲ್ 22, ರಂದು, ಮೇಷ ರಾಶಿಯನ್ನು ಪ್ರವೇಶಿಸಿರುವ ಗುರು ಇನ್ನು ಮುಂದಿನ 18 ತಿಂಗಳ ಕಾಲ ಅಲ್ಲಿಯೇ ಇರಲಿದೆ. ಈ ಸಮಯದಲ್ಲಿ, ಕೆಲವು ರಾಶಿಯವರು ತಮ್ಮ ಜೀವನದಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಈ ರಾಶಿಯವರಿಗೆ ಹಠಾತ್ ಧನ ಲಾಭವಾಗುವುದು. ಪ್ರತಿಯೊಂದು ಹೆಜ್ಜೆಯಲ್ಲಿಯೂ ಪ್ರಗತಿಯಾಗುವುದು.

ಮೇಷ – ಗುರುಗ್ರಹ ರಾಶಿ ಬದಲಾವಣೆಯು ಮೇಷ ರಾಶಿಯವರ ಕಷ್ಟವನ್ನು ಬದಿಗೆ ಸರಿಸಿ ಬಿಡುತ್ತದೆ. ರಾಜಯೋಗದ ಮೂಲಕ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗಲಿದೆ. ಹೊಸ ಆದಾಯದ ಮೂಲ ಒದಗಿ ಬರುವುದು. ಗೌರವ ಪ್ರಾಪ್ತಿಯಾಗಲಿದೆ. ಅದೃಷ್ಟವಶಾತ್, ಕೆಲವು ಕೆಲಸಗಳನ್ನು ಮಾಡಬೇಕಾಗಿ ಬರಬಹುದು. ಆದರೆ ಯಾವ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಪಡೆಯುವುದು ಖಚಿತ

ಕಟಕ : ಈ ರಾಶಿಯವರಿಗೆ ಶುಭ ಫಲಗಳು ಸಿಗಲಿವೆ. ಇನ್ನು 18 ತಿಂಗಳಲ್ಲಿ ಈ ರಾಶಿಯವರ ಜೀವನದಲ್ಲಿ ದುಡ್ಡಿನ ಸುರಿ ಮಳೆಯಾಗಲಿದೆ. ಈ ರಾಶಿಯ ಹತ್ತನೇ ಮನೆಯಲ್ಲಿ ಗುರುವಿನ ಸಂಚಾರವಾಗುತ್ತಿದೆ. ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ನೀವು ಬಯಸಿದ ಕೆಲಸ ಪಡೆಯುವುದು ಸಾಧ್ಯವಾಗುತ್ತದೆ. ಈ ಸಮಯವು ಉದ್ಯಮಿಗಳಿಗೂ ಉತ್ತಮವಾಗಿರುತ್ತದೆ. ವ್ಯಾಪಾರ ವಿಸ್ತರಣೆ ಸಾಧ್ಯವಾಗುತ್ತದೆ. ಈ ಸಮಯದಲ್ಲಿ ಎರದೂವರೆ ವರ್ಷದ ಶನಿ ದೆಸೆ ನಡೆಯುತ್ತಿದೆ. ಹಾಗಾಗಿ ಆರೋಗ್ಯದ ಬಗ್ಗೆ ಸ್ವಲ್ಪ ಜಾಗೃತೆ ಅಗತ್ಯ.

error: Content is protected !!