ಕೂಗು ನಿಮ್ಮದು ಧ್ವನಿ ನಮ್ಮದು

ವಾರದ ಬಳಿಕ ಈ ಮೂರು ರಾಶಿಯವರಿಗೆ ಹಣದ ಸುರಿಮಳೆ ಸುರಿಸಲಿದ್ದಾನೆ ಶುಕ್ರ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಖ-ಸಂಪತ್ತು, ಐಷಾರಾಮಿ ಜೀವನಕಾರಕನಾದ ಶುಕ್ರನು ಶೀಘ್ರದಲ್ಲೇ ರಾಶಿ ಪರಿವರ್ತನೆ ಮಾಡಲಿದ್ದಾನೆ. ಮೇ ತಿಂಗಳ ಆರಂಭದಲ್ಲಿ ಮಿಥುನ ರಾಶಿಯನ್ನು ಪ್ರವೇಶಿಸಿದ್ದ ಶುಕ್ರನು ಇನ್ನೊಂದು ವಾರದಲ್ಲಿ ಕರ್ಕಾಟಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 30 ಮೇ 2023ರಂದು ರಾತ್ರಿ 7.51ರ ಸುಮಾರಿಗೆ ಶುಕ್ರ ರಾಶಿ ಪರಿವರ್ತನೆ ಹೊಂದಲಿದ್ದಾನೆ.

ಕರ್ಕಾಟಕ ರಾಶಿಗೆ ಐಷಾರಾಮಿ ಜೀವನದ ಅಂಶವಾದ ಶುಕ್ರನ ಪ್ರವೇಶವು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಮೇ ಅಂತ್ಯದಲ್ಲಿ ಶುಕ್ರನ ರಾಶಿ ಪರಿವರ್ತನೆಯು ಕೆಲವು ರಾಶಿಯವರ ಜೀವನದಲ್ಲಿ ಬಂಪರ್ ಧನಯೋಗವನ್ನು ತರಲಿದೆ. ಅದರಲ್ಲೂ ಮೂರು ರಾಶಿಯವರ ಜೀವನದಲ್ಲಿ ಶುಕ್ರನು ಹಣದ ಹೊಳೆಯನ್ನೇ ಹರಿಸಲಿದ್ದಾನೆ ಎಂದು ಹೇಳಲಾಗುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ

ಶುಕ್ರ ರಾಶಿ ಪರಿವರ್ತನೆಯಿಂದ ಈ 3 ರಾಶಿಯವರಿಗೆ ವಿಶೇಷ ಪ್ರಯೋಜನ:
ಮಿಥುನ ರಾಶಿ:ಪ್ರಸ್ತುತ ಮಿಥುನ ರಾಶಿಯಲ್ಲಿಯೇ ಇರುವ ಶುಕ್ರ 30 ಮೇ 2023ರಂದು ಕರ್ಕಾಟಕ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಶುಕ್ರನ ಚಲನೆಯಲ್ಲಿನ ಈ ಬದಲಾವಣೆಯು ಮಿಥುನ ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಮಂಗಳಕರ ಎಂದು ಸಾಬೀತುಪಡಿಸಲಿದೆ. ವಾಸ್ತವವಾಗಿ, ಗ್ರಹಗಳ ರಾಜಕುಮಾರ ಬುಧ ಮಿಥುನ ರಾಶಿಯ ಅಧಿಪತಿಯಾಗಿದ್ದು, ಬುಧ-ಶುಕ್ರರು ಮಿತ್ರ ಗ್ರಹಗಳು. ಹಾಗಾಗಿ, ಶುಕ್ರ ರಾಶಿ ಪರಿವರ್ತನೆಯು ಈ ರಾಶಿಯವರಿಗೆ ಬಂಪರ್ ಆರ್ಥಿಕ ಲಾಭವನ್ನು ನೀಡಲಿದೆ. ಸಂಪತ್ತು ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.

ಕರ್ಕಾಟಕ ರಾಶಿ:
ವಾರದ ಬಳಿಕ ಸ್ವ ರಾಶಿಯಲ್ಲಿ ಶುಕ್ರನ ಸಂಚಾರವು ಈ ರಾಶಿಯವರಿಗೆ ಬಂಗಾರದಂತ ಸಮಯ ಎಂತಲೇ ಬಣ್ಣಿಸಲಾಗುತ್ತಿದೆ. ಈ ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ಆದಾಯದ ಹೊಸ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆಕಸ್ಮಿಕ ಹಣಕಾಸಿನ ಹರಿವು ಹೆಚ್ಚಾಗಲಿದೆ. ನಿಮ್ಮ ಮಧುರವಾದ ಮಾತಿಗೆ ಕಲ್ಲನ್ನೇ ಕರಗಿಸುವ ಶಕ್ತಿ ದೊರೆಯಲಿದ್ದು ನೀವು ಅಂದುಕೊಂಡಂತೆ ಕೆಲಸ ಕಾರ್ಯಗಳು ಜರುಗಲಿವೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದ್ದು, ವ್ಯಾಪಾರಸ್ಥರಿಗೆ ದೊಡ್ಡ ಆರ್ಡರ್ ಸಿಗುವ ಸಂಭವವಿದೆ.

ಕನ್ಯಾ ರಾಶಿ:
ಶುಕ್ರ ರಾಶಿ ಪರಿವರ್ತನೆಯು ಕನ್ಯಾ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. ಈ ಸಮಯದಲ್ಲಿ ಕನ್ಯಾ ರಾಶಿಯವರು ತಮ್ಮೆಲ್ಲಾ ಆರ್ಥಿಕ ಸಮಸ್ಯೆಗಳಿಂದ ಹೊರಬರಲಿದ್ದು, ದೀರ್ಘ ಸಮಯದಿಂದ ಸ್ಥಗಿತಗೊಂಡಿರುವ ಕೆಲಸಗಳು ವೇಗವನ್ನು ಪಡೆಯಲಿವೆ. ಕೆಲಸದಲ್ಲಿ ನಿರೀಕ್ಷಿತ ಯಶಸ್ಸು ಪ್ರಾಪ್ತಿಯಾಗಲಿದ್ದು ಭರ್ಜರಿ ಹಣಕಾಸಿನ ಪ್ರಯೋಜನವೂ ಆಗಲಿದೆ. ಒಟ್ಟಾರೆಯಾಗಿ ಇದು ನಿಮಗೆ ಅತ್ಯುತ್ತಮ ಸಮಯ ಎಂದು ಸಾಬೀತು ಪಡಿಸಲಿದೆ.

error: Content is protected !!