ವೈದಿಕ ಜ್ಯೋತಿಷ್ಯದ ಪ್ರಕಾರ, ಗುರುವು ಪ್ರಸ್ತುತ ತನ್ನದೇ ಆದ ಮೀನ ರಾಶಿಯಲ್ಲಿದೆ. 12 ವರ್ಷಗಳ ನಂತರ ಏಪ್ರಿಲ್ 22, 2023 ರಂದು ಮೇಷ ರಾಶಿಯಲ್ಲಿ ಸಂಕ್ರಮಿಸುತ್ತಾನೆ. ಇದಾದ ನಂತರ ಏಪ್ರಿಲ್ 27 ರಂದು ಮೇಷ ರಾಶಿಯಲ್ಲಿ ಉದಯಿಸುತ್ತಾನೆ.
ಮೇಷ ರಾಶಿ: ಈ ರಾಶಿಯವರು ಯಾವ ಕೆಲಸ ಮಾಡಿದರೂ ಯಶಸ್ಸು ಗಳಿಸುವರು. ವಿದೇಶ ಪ್ರಯಾಣದ ಯೋಗ ಕೂಡಿ ಬರುವುದು. ವ್ಯಾಪಾರ ವ್ಯವಹಾರ ಮಾಡುವವರಿಗೂ ಆಗುವುದು ಲಾಭ. ನೀವು ಮಾಡುವ ಕೆಲಸಗಳಿಗೆ ಕಚೇರಿಯಲ್ಲಿ ಪ್ರಶಂಸೆ ಸಿಗುವುದು.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಗುರು ಗ್ರಹಡ ಸಂಕ್ರಮಣ ಮತ್ತು ಉದಯ ಆರ್ಥಿಕ ಲಾಭವನ್ನು ನೀಡುತ್ತದೆ. ಹೊಸ ಉದ್ಯೋಗಾವಕಾಶಗಳು ಸಿಗಬಹುದು. ಕೆಲಸ ಬದಲಿಸಲು ಯೋಚಿಸುವವರು ಈ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಬಹುದು. ಗುರುವಿನ ಆಶೀರ್ವಾದದಿಂದ ನಿಮ್ಮ ನಿರ್ಧಾರ ಗೆಲ್ಲುತ್ತದೆ. ಆದಾಯ ಹೆಚ್ಚಾಗುತ್ತದೆ.
ಸಿಂಹ ರಾಶಿ: ಗುರು ಸಂಕ್ರಮಣ ಮತ್ತು ಗುರು ಉದಯ ಸಿಂಹ ರಾಶಿಯವರಿಗೆ ಕೆಲಸ ಮತ್ತು ವ್ಯವಹಾರ ಎರಡರಲ್ಲೂ ಲಾಭವನ್ನು ಕರುಣಿಸುತ್ತಾನೆ. ಸೋಲುತ್ತೇವೆ ಎನ್ನುವ ಭಯವಿಲ್ಲದೆ ಮುನ್ನಡೆಯಬಹುದು. ಗುರು ಗ್ರಹದ ಆಶೀರ್ವಾದ ಇರುವುದರಿಂದ ಸೋಲು ನಿಮ್ಮ ಬಳಿ ಸುಳಿಯುವುದಿಲ್ಲ. ನಿಮಗೆ ತಿಳಿಯದ ಮೂಲದಿಂದಲೂ ಹಣ ಹರಿದು ಬರುವುದು.
ಕುಂಭ ರಾಶಿ: ಗುರುವಿನ ಉದಯ ಕುಂಭ ರಾಶಿಯವರ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವುದು. ಕುಂಭ ರಾಶಿಯವರ ಜಾತಕದಲ್ಲಿ ಸಾಡೇ ಸಾತಿ ನಡೆಯಲಿದೆ. ಗುರುವಿನ ಸ್ಥಾನ ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಸಾಡೇಸಾತಿಯ ಪ್ರಭಾವ ಕೂಡಾ ಕಡಿಮೆಯಾಗುವುದು. ಸಾಡೇ ಸಾತಿಯಿಂದ ಎದುರಾಗುವ ಕಷ್ಟಗಳು ದೂರವಾಗುವುದು.