ಕೂಗು ನಿಮ್ಮದು ಧ್ವನಿ ನಮ್ಮದು

ನನ್ನ ಫೋನ್ ಕದ್ದಾಲಿಕೆ ಆಗ್ತಿದೆ-ಬೆಲ್ಲದ್ ಗಂಭೀರ ಆರೋಪ

ಬೆಂಗಳೂರು: ಇತ್ತೀಚೆಗೆ ಕರ್ನಾಟಕದಲ್ಲಿ ಬಹಳಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ನನ್ನಲ್ಲಿ ಯಾವುದೇ ರೀತಿಯ ತಪ್ಪು ಇಲ್ಲದೇ ಇರುವ ಕಾರಣಕ್ಕೆ, ನನನ್ನು ಯಾವುದೋ ಪ್ರಕರಣದಲ್ಲಿ ಸಿಲುಕಿಸಲು ಸಂಚು ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ  ಯುವರಾಜ ಸ್ವಾಮಿ ಅಂತಾ ಒಬ್ಬರು ಕರೆ ಮಾಡಿದ್ರು. ನನ್ನನ್ನು ಅನಾವಶ್ಯಕವಾಗಿ ಜೈಲಿಗೆ ಹಾಕಿದ್ರು ಅಂತಾ ಏನೇನೋ ಹೇಳ್ತಿದ್ರು. ನನಗೆ ಬಂದಿರುವ ಈ ಕರೆ ಹಿಂದೆ ದೊಡ್ಡ ಪಿತೂರಿ ಇದೆ. ಯುವರಾಜ ಸ್ವಾಮಿ ಎಂಬುವರ ಬಗ್ಗೆ ನನಗೆ ಗೊತ್ತಿಲ್ಲ. ಒಬ್ಬ ಜೈಲಿನಲ್ಲಿ ಇರೋ ವ್ಯಕ್ತಿ ನನಗೆ ಯಾಕೆ ಕರೆ ಮಾಡ್ತಾನೆ.  ಅವನಿಗೆ ಫೋನ್ ಎಲ್ಲಿಂದ ಬರುತ್ತೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿಧಾನಸಭಾ ಅಧ್ಯಕ್ಷರು ಹಾಗೂ ಗೃಹ ಸಚಿವರಿಗೆ ದೂರು ಕೊಟ್ಟಿದ್ದೇನೆ ಎಂದರು. ಇನ್ನು ನನ್ನ ಫೋನ್ ಕದ್ದಾಲಿಕೆ ಆಗ್ತಿದೆ. ನನಗೆ ಬರುವ ಕರೆ ಮಾನಿಟರ್ ಮಾಡ್ತಿದ್ದಾರೆ. ರಾಜಕೀಯದಲ್ಲಿ ಈ ರೀತಿ ಎಲ್ಲಾ ಆಗ್ತಿದೆ. ಏನೋ ನಿಮ್ಮ ಹೆಸರು ಕೇಳಿ ಬರ್ತಿದೆಯಲ್ಲ. ಏನು, ಎತ್ತ, ಎಂತೆಲ್ಲಾ ಯುವರಾಜ್ ಫೋನ್ನಲ್ಲಿ ಕೇಳಿದ್ರು. ಹಿಂದೆ ಯಾವಾಗಲೂ ಈ ರೀತಿಯ ಫೋನ್ ಬಂದಿಲ್ಲ. ಆದರೆ ಇವಾಗ ರಾಜಕೀಯ ಬೆಳವಣಿಗೆ ನಂತರ ಈ ರೀತಿಯ ಕರೆಗಳು ಬರುತ್ತಿವೆ ಎಂದಿದ್ದಾರೆ.

error: Content is protected !!