ಕೂಗು ನಿಮ್ಮದು ಧ್ವನಿ ನಮ್ಮದು

ಒಂದೇ ಕುಟುಂಬದ ಐವರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು: ಹಂತಕಿ ಅರೇಸ್ಟ್

ಮಂಡ್ಯ: ಮಹಿಳೆ, ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಕೊಲೆ ಮಾಡಿ ಪೊಲೀಸರ ನಿದ್ದೇಗೆಡಿಸಿದ್ದ ಹಂತಕಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಹಂತಕಿ ಲಕ್ಷ್ಮೀ

ಹಂತಕಿಗೆ ಕೊಲೆಯಾದ ಮಹಿಳೆಯ ಗಂಡನ ಮೇಲೆ ಕ್ರಷ್ ಇತ್ತು. ಆತನ‌ ಮೇಲಿನ ಪ್ರೀತಿಗೆ ಪಾತಕಿ ಐವರನ್ನು ಕೊಲೆ‌‌ ಮಾಡಿದ್ದಾಳೆ. ಕೊಲೆ ಮಾಡಿ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ ಲಕ್ಷ್ಮಿಗೆ (26), ಕೊಲೆಯಾದ ಲಕ್ಷ್ಮಿ ಗಂಡ ಗಂಗಾರಾಮ್ ಮೇಲೆ ಲವ್ ಇತ್ತು. ಆಕೆಯನ್ನು ಬಿಟ್ಟು ತನ್ನನ್ನ ಮದುವೆಯಾಗು ಅಂತ ಹಂತಕಿ ಲಕ್ಷ್ಮೀ, ಗಂಗಾರಾಮ್ ನನ್ನು ಪೀಡಿಸುತ್ತಿದ್ದಳು. ಈಗ ಅದೇ ಮಹಿಳೆಯಿಂದ ಈ ಘೋರ ಕೃತ್ಯ ನಡೆದುಹೋಗಿದೆ. ಗಂಗಾರಾಮ್ ಸಂಬಂಧಿಯೆ ಆಗಿರುವ ಹಂತಕಿ ಮಹಿಳೆ, ಆಂದ್ರ ಪ್ರದೇಶದಲ್ಲಿ ವಾಸವಿದ್ದಳು. ಇದೀಗ ಕಳೆದ ಎರಡು ತಿಂಗಳಿಂದ ಮೈಸೂರಿನಲ್ಲಿ ವಾಸ ಮಾಡುತ್ತಿದ್ಲು ಎನ್ನಲಾಗಿದೆ.

ಇನ್ನು ಹಂತಕಿ ಲಕ್ಷ್ಮೀ ಅಂದು ಪಾಪದ ಐವರನ್ನು ಕೊಲೆ ಮಾಡಿ ಯಾರಿಗೂ ಸಂದೇಹ ಬಾರದಂತೆ, ಅಮಾಯಕಿಯಂತೆ ಜನರ ಮಧ್ಯ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಈ ಪ್ರಕರಣ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಆದರೆ ಪೊಲೀಸರಿಗೆ ಸಿಕ್ಕ ಸಣ್ಣ ಸುಳಿವಿನಿಂದ ಪ್ರಕರಣ ಭೇದಿಸಿದ ಪೊಲೀಸರು‌ ಹಂತಕಿಗೆ ಜೈಲು ಕಂಬಿ ತೋರಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಇದೇ ತಿಂಗಳ 6ನೇ ತಾರೀಖು ಬೆಳಿಗ್ಗೆ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಬಿಭತ್ಸವಾಗಿ ಕೊಲೆಗೈದ ಸುದ್ದಿ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಗ್ರಾಮದಲ್ಲಿ ನಡೆದಿತ್ತು. ಇನ್ನು ಕೊಲೆಯಾದವರನ್ನು ಲಕ್ಷ್ಮೀ (26), ರಾಜ್ (12), ಕೋಮಲ್ (7), ಕುನಾಲ್ (4) ಹಾಗೂ ಗೋವಿಂದ (8) ಎಂದು ಗುರುತಿಸಲಾಗಿತ್ತು.

ಘಟನಾ ಸ್ಥಳಕ್ಕೆ ಮಂಡ್ಯ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು, ಶ್ವಾನ ದಳ ಕೂಡ ಸ್ಥಳಕ್ಕಾಗಮಿಸಿತ್ತು. ಈ ಭೀಕರ ಕೃತ್ಯಕ್ಕೆ ಕೆಆರ್ ಎಸ್ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಮಶಾನ ಮೌನ ಆವರಿಸಿತ್ತು.

ಮಾರಾಕಾಸ್ತ್ರದಿಂದ ಕೊಚ್ಚಿ‌ ಕೊಲೆ ಮಾಡಿರುವ ದುಷ್ಕರ್ಮಿ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಇದೀಗ ಮಳ್ಳಿಯಂತೆ ತನ್ನ ಕೆಲಸ ಸಾಧಿಕೊಂಡು, ಗೆದ್ದೆ ಎಂದು ಬೀಗಿದ್ದ ನಯವಂಚಕ ಹಂತಕಿ ಕೊನೆಗೂ ಪೊಲೀಸರ ಕೆಡ್ಡಾಗೆ ಬಿದ್ದಿದ್ದಾಳೆ.

error: Content is protected !!