ಉಡುಪಿ: ಕುಂದಾಪುರ ಸರ್ಕಾರಿ ಕಾಲೇಜು ಬಳಿ ಅಕ್ರಮ ಕೂಟ ಸೇರಿ ಚರ್ಚಿಸುತ್ತಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಸರಕಾರಿ ಜೂನಿಯರ್ ಕಾಲೇಜು ಸಮೀಪ ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದು, ಅಕ್ರಮ ಕೂಟ ಸೇರಿ ಚರ್ಚೆ ಮಾಡುತ್ತಿದ್ದ ತಂಡದಲ್ಲಿ ಐದರಿಂದ ಆರು ಜನ ಇದ್ದರು. ಪೊಲೀಸರು ಬರುತ್ತಿದ್ದಂತೆ ಸ್ಥಳದಲ್ಲಿದ್ದ ನಾಲ್ಕು ಜನ ಪರಾರಿಯಾಗಿದ್ದು, ಹಾಜಿ ಅಬ್ದುಲ್ ಮಜಿದ್ ( 31) ಮತ್ತು
ರಜಬ್ (41) ಎಂಬುವರನ್ನ ಬಂಧಿಸಲಾಗಿದೆ.
ಇನ್ನು ಖಲೀಲ್, ಇಫ್ತಿಕಾರ್, ರಿಜ್ವಾನ್ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನು ಬಂಧಿತ ಹಾಜಿ ಅಬ್ದುಲ್ಲಾ ಮಜಿದ್ ವಿರುದ್ಧ ಈಗಾಗಲೇ 7 ಪ್ರಕರಣಗಳು ಇದ್ದು, ರಜಬ್ ವಿರುದ್ಧ ಒಂದು ಪ್ರಕರಣ ಈ ಹಿಂದೆ ದಾಖಲಾಗಿದೆ ಎನ್ನಲಾಗಿದೆ.
ಉಡುಪಿ ಜಿಲ್ಲೆ ಕುಂದಾಪುರ ಪೊಲೀಸರು ಈ ಕಾರ್ಯಚರಣೆ ನಡೆಸಿದ್ದು, ಬಂಧಿತ ಆರೋಪಿಗಳ ಕೈಯಿಂದ ಚಾಕು ವಶಪಡಿಸಿಕೊಂಡಿದ್ದಾರೆ.