ಕೂಗು ನಿಮ್ಮದು ಧ್ವನಿ ನಮ್ಮದು

ಪಿಎಸ್ಐ ಅಕ್ರಮ ತಪ್ಪಿತಸ್ಥರು ಮುಟ್ಟಿನೋಡ್ಕೋಬೇಕು ಹಾಗೆ ಮಾಡ್ತಿವಿ: ಆರಗ ಜ್ಞಾನೇಂದ್ರ

ಕಲಬುರಗಿ: PSI ನೇಮಕಾತಿ ಅಕ್ರಮದಲ್ಲಿ ಕೈ ಹಾಕಿದವರು ಇನ್ನೊಮ್ಮೆ ಹೀಗೆ ಮಾಡಲು ಆಗದಂತೆ ಮುಟ್ಟಿ ನೋಡಿಕೊಳ್ಳಬೇಕು ಹಾಗೆ ಮಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್‍ನವರು ಆರೋಪ ಮಾಡುತ್ತಿದ್ದಾರೆ. ದಾಖಲಾತಿ ಕೇಳಿದ್ರೆ ಓಡಿ ಹೋಗುತ್ತಾರೆ. ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗಿಲ್ಲ, ತನಿಖೆಯ ದಿಕ್ಕೂ ತಪ್ಪಿಸುವುದೊಂದೇ ಇವರ ಉದ್ದೇಶ ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ. 


ಕಲಬುರಗಿಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ ಅವರು, PSI ನೇಮಕಾತಿ ಅಕ್ರಮದಲ್ಲಿ ಮೂನ್ನೂರು ಕೋಟಿ ಅಕ್ರಮ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ, ಸಿದ್ದರಾಮಯ್ಯ ಮುನ್ನೂರು ಕೋಟಿ ಅಲ್ಲ ಮೂರು ಸಾವಿರ ಕೋಟಿ ಆರೋಪ ಮಾಡಲಿ, ಮಾತನಾಡುವುದಕ್ಕೆ ಅವರಿಗೆ ವಾಕ್ ಸ್ವಾತಂತ್ರವಿದೆ ಎಂದು ತಿರುಗೇಟು ನೀಡಿದ್ದಾರೆ. ನಿರಾಧಾರವಾಗಿ ಆರೋಪ ಮಾಡುವುದು, ದಾಖಲಾತಿ ಕೇಳಿದರೆ ಓಡಿಹೋಗುವುದು ಕಾಂಗ್ರೆಸ್ ಕೆಲಸವಾಗಿದೆ.

ಪ್ರಕರಣದಲ್ಲಿ ಸಿಲುಕಿದವರು ಬಹುತೇಕ ಕಾಂಗ್ರೆಸ್‍ನವರು. ತನಿಖೆ ಸರಿಯಾಗಿ ನಡೆದರೆ ತಮ್ಮ ಬುಡಕ್ಕೆ ಬರುತ್ತದೆ ಎನ್ನುವುದು ಗೊತ್ತಾಗಿ ತನಿಖೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಸದ್ಯ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಅಕ್ರಮದಲ್ಲಿ ಕೈ ಹಾಕಿದವರು ಇನ್ನೊಮ್ಮೆ ಹೀಗೆ ಮಾಡಲು ಆಗದಂತೆ ಮುಟ್ಟಿ ನೋಡಿಕೊಳ್ಳಬೇಕು ಹಾಗೆ ಮಾಡುತ್ತೇನೆ ಎಂದಿದ್ದಾರೆ.

error: Content is protected !!