ಕೂಗು ನಿಮ್ಮದು ಧ್ವನಿ ನಮ್ಮದು

ತಾಲಿಬಾನ್‍ಗೂ, ಆರ್.ಎಸ್.ಎಸ್ ಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಅರಗ ಜ್ಞಾನೇಂದ್ರ ತಿರುಗೇಟು

ಮೈಸೂರು: RSS ನವರದ್ದು ತಾಲಿಬಾನ್ ಸಂಸ್ಕೃತಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಮೈಸೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು ನೀಡಿದ್ರು. ಇವತ್ತು ಮೈಸೂರಿನಲ್ಲಿ ಮಾತನಾಡಿರುವ ಅರಗ ಜ್ಞಾನೇಂದ್ರ ಸಿದ್ದರಾಮಯ್ಯನವರಂತ ಹಿರಿಯರು ಆಡಿರುವ ಮಾತಿಗೆ ನಾನು ಏನು ಹೇಳುವುದಿಲ್ಲ.

ವಿಪಕ್ಷ ನಾಯಕ ಸಿದ್ದರಾಮಯ್ಯ ಹೊಟ್ಟೆ ಕಿಚ್ಚು ಪಡಿಸುವಷ್ಟು ನಾವು ಕೆಲಸ ಮಾಡುತ್ತಿದ್ದೇವೆ. ಜೊತೆಗೆ ತಾಲಿಬಾನ್‍ಗೂ RSS ಗೆ ವ್ಯತ್ಯಾಸ ಏನೆಂದು ಎಲ್ಲರಿಗೂ ಗೊತ್ತಿದೆ. ಹಿರಿಯರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಜನ ದಡ್ಡರಲ್ಲ ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಅರಗ ಜ್ಞಾನೇಂದ್ರ ಹೇಳಿದರು.

RSS ದೇಶಕ್ಕಾಗಿ ಏನು ಕೆಲಸ ಮಾಡುತ್ತಿದೆ, ಮತ್ತು ಹೇಗೆ ಕೆಲಸ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಷ್ಟ್ರಪತಿ, ಪ್ರಧಾನಿ, ಉಪರಾಷ್ಟ್ರಪತಿ, ರಾಜ್ಯದ ಗೃಹಮಂತ್ರಿ ಎಲ್ಲರೂ ಸಹ RSS ನಿಂದ ಬಂದತವರು. RSS ಒಳ್ಳೆಯದನ್ನು ಮಾಡು ಅನ್ನುತ್ತದೆ. ದೇಶದ ಹಿತಕ್ಕಾಗಿ ಕೆಲಸ ಮಾಡಲು ಕಲಿಸುತ್ತದೆ. ದೇಶದ ವಿಚಾರ ಬಂದಾಗ ವೈಯಕ್ತಿಕ ವಿಚಾರ ಬಲಿ ಕೊಟ್ಟು ರಾಷ್ಟ್ರದ ರಕ್ಷಣೆ ಮಾಡು ಅಂತ ಹೇಳುತ್ತದೆ. ಈ ರೀತಿ ಹೇಳುವುದು RSS ಮಾತ್ರ. ಹಾಗಾಗಿ ನಾವು RSS ಅನ್ನು ಪ್ರೀತಿಸುತ್ತೇವೆ ಎಂದು ಹೇಳಿದ್ರು.

BJP ಅವರಿಗೆ ಮನುಷ್ಯತ್ವ ವಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೂ ಪ್ರತಿಕ್ರಿಯಿಸಿ, ಯಾರಿಗೆ ಮನುಷ್ಯತ್ವ ಇಲ್ಲ ಯಾರಿಗೆ ಮನುಷ್ಯತ್ವ ಇದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಸಂಘಟನೆ ಎಲ್ಲಿದೆ ಅಂತಾ ಬ್ಯಾಟರಿ ಹಾಕಿ ಹುಡುಕಬೇಕಿದೆ ಎಂದು ವ್ಯಂಗ್ಯವಾಡಿದ್ರು.

error: Content is protected !!