ಕೂಗು ನಿಮ್ಮದು ಧ್ವನಿ ನಮ್ಮದು

ಗೋವಾದಲ್ಲಿ ಅಮಿತ್ ಶಾ – ರಮೇಶ್ ಜಾರಕಿಹೊಳಿ ಬೈಟಕ್: ಸಾಹುಕಾರ್ ಮಂತ್ರಿಗಿರಿಗೆ ಸಿಕ್ತು ಗ್ರೀನ್ ಸಿಗ್ನಲ್

ಪಣಜಿ: ಗೋಕಾಕ್ ಸಾಹುಕಾರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ನಿನ್ನೆ ಗೋವಾದಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ರಮೇಶ್ ಜಾರಕಿಹೊಳಿ ಅವರು ಶಾ ರನ್ನ ಮಾತನಾಡಿಸಿ, ನಮಸ್ಕಾರ ಮಾಡಿದಾಗ ಆತ್ಮೀಯವಾಗಿ ನಗುಮುಖದಿಂದಲೇ ಮಾತನಾಡಿದ ಕೇಂದ್ರ ಗೃಹ ಸಚಿವ ಅಮೀತ್ ಶಾ, ಗೋಕಾಕ್ ಸಾಹುಕಾರ್ ಗೆ ನಗುತ್ತಲೇ ಮಂತ್ರಿಯಾಗುವ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಗೋವಾ ವಿಧಾನಸಭಾ ಚುನಾವಣೆ ಪ್ರಚಾರ ನಿಮಿತ್ಯ ದೆಹಲಿಯಿಂದ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ನಿನ್ನೆ ಗೋವಾದಲ್ಲಿ ಪಕ್ಷದ ಪರವಾಗಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಸ್ವಾಗತಿಸಿದ್ದಾರೆ. ಈ ವೇಳೆ ನಗುಮುಖದಿಂದಲೇ ಶಾ ರಮೇಶ ಜಾರಕಿಹೊಳಿ ಜತೆಗೆ ಮಾತನಾಡಿದ್ರು. ಇಬ್ಬರು ನಾಯಕರು ಉಭಯ ಕುಶಲೋಪರಿ ವಿಚಾರಿಸಿಕೊಂಡರು. ಕೆಲ ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿದ್ದ ರಮೇಶ್ ಜಾರಕಿಹೊಳಿ‌ ಈಗ ಅಮಿತ್ ಶಾ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಸಂಪುಟ ವಿಸ್ತರಣೆ ವೇಳೆ ಸಾಹುಕಾರ್ ಮಂತ್ರಿಯಾಗೋದು ಬಹುತೇಕ ಫಿಕ್ಸ್ ಆಗಿದೆ.

ಇನ್ನು ನ್ಯಾಯಾಲಯದಲ್ಲಿ ರಮೇಶ ಜಾರಕಿಹೊಳಿ ಅವರಿಗೆ ರೀಲಿಫ್ ಸಿಕ್ಕ ಬೆನ್ನಲ್ಲೇ ಮತ್ತೆ ಫುಲ್ ಆ್ಯಕ್ಟಿವ್ ಆಗಿರುವ ರಮೇಶ್ ಜಾರಕಿಹೊಳಿ‌ ಸಚಿವ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ, ದೇವೇಂದ್ರ ಫಡ್ನವಿಸ್ ಹಾಗೂ ಈಗ ಅಮಿತ್ ಭೇಟಿ ಮಾಡಿದ್ದಾರೆ. ಇನ್ನು ರಮೇಶ ಜಾರಕಿಹೊಳಿ ಹಾಗೂ ಶಾ ಭೇಟಿ ವೇಳೆ ಗೋಕಾಕ್ ಗ್ಲಾಸ್ ಬ್ರಿಡ್ಜ್ ಶಂಕು ಸ್ಥಾಪನೆಗೆ ಆಹ್ವಾನ ನೀಡಿದ್ದಾರೆ. ಈ ವೇಳೆಯಲ್ಲಿ ಗೋವಾ ಸಿಎಂ ಪ್ರಮೋದ ಸಾವಂತ ಮತ್ತು ಬೆಳಗಾವಿಯ ಬಿಜೆಪಿ ಮುಖಂಡ ಕಿರಣ್ ಜಾಧವ್ ಸೇರಿ ಅನೇಕರು ಉಪಸ್ಥಿತರಿದ್ದರು.

error: Content is protected !!