ಕೂಗು ನಿಮ್ಮದು ಧ್ವನಿ ನಮ್ಮದು

ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ದೆಹಲಿ ನಾಯಕರಿಗೆ ಎಟಿಎಮ್ ಆಗಿದ್ದು ಬಿಟ್ಟರೆ ರಾಜ್ಯಕ್ಕೇನೂ ಮಾಡಲಿಲ್ಲ: ಅಮಿತ್ ಶಾ

ಬೀದರ್: ನಿಮಗೆ ನೆನಪಿರಬಹುದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯನ್ನು ಸಿದ್ದರಾಮಯ್ಯ ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಆರಂಭಿಸಿದ್ದರು. ಬಿಜೆಪಿ ಇದೇ ಸ್ಥಳದಿಂದ ತನ್ನ ವಿಜಯ ಸಂಕಲ್ಪ ಯಾತ್ರೆಯನ್ನೇನೂ ಪ್ರಾರಂಭಿಸಿಲ್ಲವಾದರೂ ಇಂದಿನ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಮಿಸಿ ಬೃಹತ್ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ್ದು ಯಾತ್ರೆಗೆ ಆನೆ ಬಲ ನೀಡಿದೆ.

ತಮ್ಮ ಭಾಷಣದಲ್ಲಿ ಅಮಿತ್ ಶಾ ಅವರು ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡಿ ಮಾತಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದೆಹಲಿಯಲ್ಲಿದ್ದ ತಮ್ಮ ನಾಯಕರಿಗೆ ಎಟಿಎಮ್ ಆಗಿದ್ದರೇ ಹೊರತು ರಾಜ್ಯಕ್ಕೋಸ್ಕರ ಏನೂ ಮಾಡಿಲ್ಲವೆಂದು ಅವರು ಹೇಳಿದರು. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಪೊಲೀಸ್ ಌಕ್ಷನ್ ನಡೆಸದೆ ಹೋಗಿದ್ದರೆ ಈ ಭಾಗ ನಿಜಾಮನ ಆಳ್ವಿಕೆಯಲ್ಲೇ ಮುಂದುವರಿಯುತಿತ್ತು ಎಂದು ಶಾ ಹೇಳಿದರು.

error: Content is protected !!