ಮಂಡ್ಯ: ಅಕ್ಕಿ ಬದಲು ಹಣ ನೀಡಿದರೆ ಕುಟುಂಬಗಳಲ್ಲಿ ಗೊಂದಲ ಮೂಡಲಿದೆ ಎಂದು ಸರ್ಕಾರಕ್ಕೆ ಪಡಿತರ ವಿತರಕರ ಸಂಘದ ರಾಜ್ಯಧ್ಯಕ್ಷ ಕೃಷ್ಣಪ್ಪ ಕಿವಿಮಾತು ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ದುಡ್ಡು ಕೊಡುತ್ತೇವೆ ಎಂದು ಹೇಳಿಲ್ಲ. ಹೇಳಿದಂತೆ ಆಹಾರ ಪದಾರ್ಥಗಳನ್ನೆ ನೀಡಿ.
ಅಕ್ಕಿ ಕೊಡಲಾಗದಿದ್ದರೆ ಸಕ್ಕರೆ, ಕಾಳುಗಳನ್ನ ಕೊಡಿ. ದುಡ್ಡು ಕೊಡುವುದರಿಂದ ಮನೆಗಳಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿದೆ. ಕುಟುಂಬಗಳಲ್ಲಿ ಹಣದ ಕುರಿತು ಮನಸ್ಥಾನ ಉಂಟಾಗುವ ಸಾದ್ಯತೆಯಿದೆ. ಎರಡು ರಾಜ್ಯಗಳಲ್ಲಿ ಈ ರೀತಿ ಹಣ ನೀಡಿದಾಗ ಯೋಜನೆ ಪಲಕಾರಿಯಾಗಿಲ್ಲ ಎಂದು ಹೇಳಿದ್ದಾರೆ.