ಕೂಗು ನಿಮ್ಮದು ಧ್ವನಿ ನಮ್ಮದು

ಚಾಮರಾಜನಗರ ದಿಂದ ದೆಹಲಿ ಕಡೆಗೆ ಪಾದಯಾತ್ರೆ ಆರಂಭಿಸಿದ ರೈತ

ಧಾರವಾಡ: ರೈತ ಒಬ್ಬನು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಗೆ ಪಾದಯಾತ್ರೆಯನ್ನು ಆರಂಭಿಸಿದ್ದಾನೆ. ಇನ್ನೂ ನಾಗರಾಜ್ ಎಂಬ ರೈತನು ಪಾದಯಾತ್ರೆಯನ್ನು ಆರಂಭಿಸಿದ್ದು, ಚಾಮರಾಜ ನಗರದಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಸ್ಥಳಕ್ಕೆ ಹೋಗಲಿದ್ದಾರೆ. ಇನ್ನೂ ಕಳೆದ ಫೆಬ್ರವರಿಯಲ್ಲಿ ತಮ್ಮ ಪಾದಯಾತ್ರೆಯನ್ನು ಆರಂಭಿಸಿದ್ರು. ಜೊತೆಗೆ ಕೋವಿಡ್ದಿಂದ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮೊಟಕು ಗೊಳಿಸಿದ್ರು.

ಇನ್ನೂ ಜುಲೈ ೨ ರಿಂದ ತಮ್ಮ ಪಾದಯಾತ್ರೆಯನ್ನು ಮತ್ತೆ ಆರಂಭಿಸಿರುವ ರೈತ ನಾಗರಾಜ್ ಅವರು ೭ ಸಾವಿರ ಕಿಲೋ ಮೀಟರ್ ಗೆ ಪಾದಯಾತ್ರೆಯನ್ನು ಮಾಡಲಿದ್ದಾರೆ. ಇನ್ನೂ ಇಂದು ಧಾರವಾಡದ ಅಂಬೇಡ್ಕರ್ ವೃತ್ತಕ್ಕೆ ಭೇಟಿ ನೀಡಿರುವ ನಾಗರಾಜ್, ಅವರು ಕೇಂದ್ರ ಸರ್ಕಾರದ ಮೇಲೆ ಕೆಂಡ ಕಾರಿದ್ದಾರೆ. ಇನ್ನೂ ಉತ್ತರ ಪ್ರದೇಶದಲ್ಲಿ ರೈತರು ಪ್ರತಿಭಟನೆ ಮಾಡಿದ್ರೆ ಚರ್ಮ ಸುಲಿಯುತ್ತೆನೆ ಎಂದು U.P ಸರ್ಕಾರವು ಹೇಳುತ್ತಿದೆ. ಹಾಗಾಗಿ ನಾವು ಜಗ್ಗಲ್ಲ ಎಂದು ನಾಗರಾಜ್ ಅವರು ಹೇಳಿದ್ರು. ಇನ್ನೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೀತ್ ಶಾ ಅವರಿಗೆ ಎಚ್ಚರಿಕೆಯನ್ನು ನೀಡಿರುವ ಈ ರೈತನು, ರೈತರ ಮೇಲೆ ಹಲ್ಲೆ ಮಾಡಿದ್ದೇ ಆದ್ರೆ U.P ಗೆ ನಮ್ಮ ಇಡಿ ರೈತರು ನುಗ್ಗಲಿದ್ದಾರೆ ಎಂದು ಎಚ್ಚರಿಸಿದರು.

error: Content is protected !!