ಕೂಗು ನಿಮ್ಮದು ಧ್ವನಿ ನಮ್ಮದು

226 ತಾಲಿಬಾನ್‌ ಉಗ್ರರ ಹತ್ಯೆಗೈದ ಅಫಘಾನಿಸ್ತಾನದ ಸೇನೆ

  • 24 ಗಂಟೆಗಳಲ್ಲಿ 226 ತಾಲಿಬಾನ್‌ ಉಗ್ರರ ಹತ್ಯೆಗೈದ ಸೇನೆ
  • ಅಫಘಾನಿಸ್ತಾನದ ಸೇನೆಯಿಂದ ಭರ್ಜರಿ ಕಾರ್ಯಾಚರಣೆ
  • ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ 135 ಉಗ್ರರು

ಕಾಬೂಲ್‌: ಹಿಂಸಾಚಾರ ಮತ್ತು ಅತಿಕ್ರಮಣದಲ್ಲಿ ತೊಡಗಿರುವ ತಾಲಿಬಾನ್‌ ಉಗ್ರರ ವಿರುದ್ಧ ಅಫಘಾನಿಸ್ತಾನ ರಕ್ಷಣಾ ಸಚಿವಾಲಯವು ವಿಶೇಷ ಕಾರ್ಯಾಚರಣೆ ನಡೆಸಿ ಬರೋಬ್ಬರಿ 24 ಗಂಟೆಗಳಲ್ಲಿ 226 ಉಗ್ರರನ್ನು ಸೆದೆಬಡಿದಿದೆ. ಮೈದಾನ್‌ ವಾರ್ದಕ್‌, ಕಂದಹಾರ್‌, ಕುನಾರ್‌ ಪ್ರಾಂತ್ಯಗಳಲ್ಲಿ ಆಫ್ಘನ್‌ ಸೇನಾಪಡೆಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಉಗ್ರರನ್ನು ಹೊಡೆದುರುಳಿಸಿವೆ. ಸೇನಾ ಕಾರ್ಯಾಚರಣೆಯಲ್ಲಿ 135 ಉಗ್ರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು 15 ಸುಧಾರಿತ ಸ್ಫೋಟಕ ಸಾಧನಗಳನ್ನು ಪಡೆಗಳು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿವೆ.

ಆಫ್ಘನ್‌ನಿಂದ 221 ಮಂದಿ ಅಮೆರಿಕಕ್ಕೆ!?

ಅಮೆರಿಕ ಸೇನಾ ಪಡೆಗಳಿಗೆ ನೆರವು ನೀಡಿದವರನ್ನು ತಾಲಿಬಾನ್‌ ದಾಳಿಯಿಂದ ರಕ್ಷಿಸುವ ಸಲುವಾಗಿ ವಿಶೇಷ ವಿಮಾನದಲ್ಲಿ ಸುಮಾರು 221 ಆಫ್ಘನ್‌ ಪ್ರಜೆಗಳನ್ನು ಅಮೆರಿಕಕ್ಕೆ ಕರೆತರಲಾಗಿದೆ. ಅವರಲ್ಲಿ 57 ಮಕ್ಕಳು, 15 ಶಿಶುಗಳು ಸೇರಿವೆ. ವಿಶೇಷ ವೀಸಾ ಯೋಜನೆ ಅಡಿಯಲ್ಲಿ ಆಫ್ಘನ್‌ ಪ್ರಜೆಗಳಿಗೆ ಅಮೆರಿಕದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.

error: Content is protected !!