ಕೂಗು ನಿಮ್ಮದು ಧ್ವನಿ ನಮ್ಮದು

ಕಡುಬಡವರಿಗೆ ಯಾಕ್ಷನ್ ಎಡ್ ಅಸೋಸಿಯೇಷನ್ ಸಹಾಯ ಹಸ್ತ

ಚಿಕ್ಕೋಡಿ: ಕೊರೊನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಬೆಂಗಳೂರಿನ ಯಾಕ್ಶನ್ ಎಡ್ ಅಸೋಸಿಯೇಷನ್ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ಅಥಣಿ ತಾಲೂಕಿನ ಮೂರು ಗ್ರಾಮ ಪಂಚಾಯತಿ ಸೇರಿ 7 ಊರುಗಳಲ್ಲಿ ಒಟ್ಟು ಅಥಣಿ ತಾಲೂಕಿನಲ್ಲಿ 1500 ಕುಟುಂಬಗಳಿಗೆ ಹಂತ ಹಂತವಾಗಿ ಆಹಾರದ ಕಿಟ್ ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದು, ಹತ್ತು ಕೇಜಿ
ಜೋಳ, ಐದು ಕೆಜಿ ಅಕ್ಕಿ, ಒಂದು ಕೆಜಿ ಹೆಸರು ಕಾಳು, ಒಂದು ಕೇಜಿ ಸಕ್ಕರೆ, ಒಂದು ಕೇಜಿ ಕಡಲೆ ಬೀಜ, ಎರಡು ಲೀಟರ್ ಎಣ್ಣೆ, 250 ಗ್ರಾಮ್ ಚಹಾಪುಡಿ, ನೂರು ಗ್ರಾಮ್ ಜೀರಿಗೆ ಪುಡಿ, ನೂರು ಗ್ರಾಮ್ ಅರಿಸಿನ ಪುಡಿ, ನೂರು ಗ್ರಾಮ್
ಮೆಣಸು, ಐವತ್ತು ಗ್ರಾಮ ಲವಂಗ, ಐವತ್ತು ಗ್ರಾಮ ದಾಲ್ಚಿನಿ, ಒಂದು ಕೆಜಿ ಉಪ್ಪು ಮತ್ತು ಆರು ಡೆಟಾಲ್ ಸೋಪ ಹಾಗೂ ಆರು
ಬಟ್ಟೆ ಒಗೆಯುವ ಸೋಪಗಳಿಂದ ಕೂಡಿದ ದಿನಸಿ ಕಿಟ್ ಗಳನ್ನು ಹುಲಗಬಾಳ ಗ್ರಾಮದಲ್ಲಿ ಉಚಿತವಾಗಿ ವಿತರಿಸಲಾಯಿತು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಹಾರದ ಕಿಟ್ ವಿತರಿಸಲಾಗುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ಯಾಕ್ಷನ್ ಎಡ್ ಅಸೋಸಿಯೇಷನ್ ವತಿಯಿಂದ ಅಥಣಿ ತಾಲೂಕಿನ ಮೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಏಳು ಗ್ರಾಮಗಳಲ್ಲಿ ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಯಾಕ್ಷನ್ ಎಡ್ ಜಿಲ್ಲಾ ಕಾರ್ಯಕರ್ತರ ನಾಮದೇವ ಹಿರೆಕೋಡಿ ನಾಲ್ಕು ರಾಜ್ಯಗಳಲ್ಲಿ 2005, 2009, 2019 ರಲ್ಲಿ ಮಹಾಪೂರ ಬಂದ ಸಮಯದಲ್ಲಿ ಜನರಿಗೆ ಸರ್ಕಾರದ ಅನುದಾನ ಕೆಲವರಿಗೆ ಬಂತು ಕೆಲವರಿಗೆ ಬರಲಿಲ್ಲ ಮತ್ತೆ ಮಹಾಪೂರ ಬರಬಹುದು ಆದ್ದರಿಂದ ಕಳೆದ ವರ್ಷ ಪ್ರವಾಹ ಬಂದಾಗ ಮತ್ತು ಕೊವಿಡ್ ನಿಂದ ಲಾಕ್ ಡೌನ್ ಎದುರಾದ ಸಮಯದಲ್ಲಿ ಕೂಡ ದುಡಿಯುವ ಜನರಿಗೆ ಕೆಲಸ ಇಲ್ಲದೆ ಮನೆಯ ನೀರ್ವಹಣೆಯೂ ಕಷ್ಟವಾಗಿದ್ದು, ಪ್ರವಾಹದಿಂದ ಬಾಧಿತವಾದ ಕುಟುಂಬಗಳಲ್ಲಿ ಬಹಳ ಜನರಿಗೆ ದಾಖಲೆಗಳ ಕೊರತೆಯಿಂದ ಸರ್ಕಾರದ ಪರಿಹಾರ ಸಿಕ್ಕಿಲ್ಲ. ನಾವು ಎಲ್ಲರಿಗೂ ಸಹಾಯ ಮಾಡಲು ಸಾಧ್ಯವಿಲ್ಲ ಆದರೆ ಸಾಧ್ಯವಾದಷ್ಟು ಜನರಿಗೆ ಅದರಲ್ಲೂ ಅರ್ಹರನ್ನು ಗುರುತಿಸಿ ಪಡಿತರ ಕಿಟ್ ವಿತರಿಸುತ್ತಿದ್ದೇವೆ ಎಂದರಲ್ಲದೆ ಗ್ರಾಮೀಣ ಭಾಗದ ಜನರು ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಜರ್ ಬಳಸಿ ಶಿಸ್ತು ಪಾಲನೆ ಮಾಡಿಕೊಳ್ಳುವ ಅಗತ್ಯ ಇದೆ. ಅಥಣಿ ತಾಲೂಕಿನ 1500 ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸುವ ಯೋಚನೆ ಇದೆ ಅದರ ಜೊತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಸಹಕರಿಸಲಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಪಡಿತರವನ್ನು ಖರೀದಿಸಿ ರಾಜ್ಯದ ವಿವಿಧ ಜಿಲ್ಲೆಗಳ ಬಡವರಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದ್ದು, ಇಂದು ಹುಲಗಬಾಳ ಗ್ರಾಮ 250 ಕುಟುಂಬಗಳಿಗೆ ಹಂಚಿಕೆ ಮಾಡಿದ್ದೇವೆ ಎಂದರು. ಈ ವೇಳೆ ಮಾತನಾಡಿದ ಪಂಚಾಯತ ಸದಸ್ಯ ನಾಗರಾಜ ಕಾಂಬಳೆ 2019 ರಲ್ಲಿ ಮನೆ ಮನೆಗೆ ತೆರಳಿ ಪೋಟೊ ತೆಗದುಕೊಂಡಾಗ ಬಹಳ ಅಡ್ಡಿಯಾಗಿತ್ತು ಆದರೆ ಸದ್ಯ ನೊಂದ ಮತ್ತು ಹಸಿದ ಜನರಿಗೆ ಆಹಾರ ಸಾಮಗ್ರಿಗಳನ್ನು ಹುಲಗಬಾಳ ಗ್ರಾಮದ ಬಡ ಕುಟುಂಬಗಳನ್ನು ‌ಗಮನದಲ್ಲಿ ಇಟ್ಟುಕೊಂಡು ವಿತರಣೆ ಮಾಡಲಾಗುತ್ತಿದೆ ಎಂದರು.

error: Content is protected !!