ಹಾಸನ: ಚಾಲಕನ ಕಂಟ್ರೋಲ್ ತಪ್ಪಿ ತುಂಬಿ ಹರಿಯುತ್ತಿದ್ದ ನಾಲೆಗೆ ಟ್ರ್ಯಾಕ್ಟರ್ ಬಿದ್ದಿದ್ದೆ. ಅಲ್ಲಿಯ ಸ್ಥಳೀಯ ರೈತರು ಟ್ರ್ಯಾಕ್ಟರ್ ಚಾಲಕನನ್ನು ರಕ್ಷಣೆ ಮಾಡಿರುವ ಘಟನೆಯು ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರು ಗ್ರಾಮದಲ್ಲಿ ಸಂಭವಿಸಿದೆ. ದೇವಿಗೆರೆ ಗ್ರಾಮದ ಮಂಜುನಾಥ್ ಎಂಬುವವನು ಟ್ರ್ಯಾಕ್ಟರ್ ಅಲ್ಲಿ ಮಣ್ಣು ಹೇರಿಕೊಂಡು ನಾಲೆ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ರು.
ಈ ಸಮಯದಲ್ಲಿ ಕಂಟ್ರೋಲ್ ತಪ್ಪಿದ ಟ್ರ್ಯಾಕ್ಟರ್ ನೀರಿಗೆ ಬಿದ್ದಿದೆ. ಅದನ್ನು ಗಮನಿಸಿದ ಅಲ್ಲಿಯ ದಿಂಡಗೂರು ಗ್ರಾಮದ ರೈತರಾದ ದಯಾನಂದ ಹಾಗೂ ಹರೀಶ್, ತಕ್ಷಣ ನೀರಿಗೆ ಇಳಿದು ಚಾಲಕನ ರಕ್ಷಣೆ ಮಾಡಿದ್ದಾರೆ. ಬಳಿಕ ಕ್ರೇನ್ ಮೂಲಕ ಟ್ರ್ಯಾಕ್ಟರ್ ಮೇಲೆತ್ತಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.