ರಾಯಚೂರು: ನಗರದ ಮನ್ಸಲಾಪೂರ ರಸ್ತೆಯಲ್ಲಿ ಬೊಲೆರೋ ವಾಹನ ಮತ್ತು ದ್ವಿಚಕ್ರ ವಾಹನ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ನರಸಪ್ಪ (33), ಆತನ ಪತ್ನಿ ಮಾಯಮ್ಮ ಗಂಭೀರ ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ ಒಂಬತ್ತು ಗಂಟೆಗೆ ಮೃತ ನರಸಪ್ಪನ ಪತ್ನಿ ತೀವ್ರ ಜ್ವರದಿಂದ ಬಳಲುತ್ತಿದ್ದರು, ಅವರನ್ನು ನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿದೆ. ನರಸಪ್ಪ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯ ಮೃತಪಟ್ಟಿದ್ದಾರೆ. ಮೃತ ನರಸಪ್ಪ ಅವರಿಗೆ ಎರಡು ಮಕ್ಕಳಿದ್ದಾರೆ.