ಕೂಗು ನಿಮ್ಮದು ಧ್ವನಿ ನಮ್ಮದು

ಜೆಡಿಎಸ್ ತೊರೆದು ಬಿಜೆಪಿ ಸೇರಿದರೂ ಸಿಗದ ಟಿಕೆಟ್: ಸ್ಪಷ್ಟನೆ ಕೊಟ್ಟ ಮಾಜಿ ಶಾಸಕ ಎಟಿ ರಾಮಸ್ವಾಮಿ

ಹಾಸನ: ನಿನ್ನೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದ್ದು, ಟಿಕೆಟ್ ಸಿಗದ ಕುರಿತು ‘ನಾನು ದೆಹಲಿ, ಬೆಂಗಳೂರು, ಹಾಸನದಲ್ಲಿ ಬಿಜೆಪಿ ಸೇರಿದ್ದು ಯಾವುದೇ ಅಧಿಕಾರದ ಆಸೆಗಾಗಿ ಅಲ್ಲ. ನಾನು ಟಿಕೆಟ್ ಅಪೇಕ್ಷಿತನೂ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದು ಇತ್ತಿಚೇಗೆ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಶಾಸಕ ಎಟಿ ರಾಮಸ್ವಾಮಿ ಹೇಳಿದ್ದಾರೆ. ‘ ಬಿಜೆಪಿ ವರಿಷ್ಠರು ಕೂಡ ಬಹಳ ಒತ್ತಡ ಹಾಕಿ ಅಭ್ಯರ್ಥಿ ಆಗಲು ಹೇಳಿದ್ದರು. ನಾನು ಯಾವುದೇ ಕಾರಣದಿಂದಲೂ ಸ್ಪರ್ಧೆ ಮಾಡಲ್ಲವೆಂದು ಹೇಳಿದ್ದೆ, ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಎಟಿ ರಾಮಸ್ವಾಮಿ ಅವರು ಬಿಜೆಪಿಗೆ ಹೋದರೂ ಟಿಕೆಟ್ ಸಿಗಲಿಲ್ಲವೆಂದು, ನಾನು ಮಾತಿನಂತೆ ಹಿಂದೆ ಸರಿದಿಲ್ಲ, ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಎಟಿ ರಾಮಸ್ವಾಮಿ ಹೇಳಿದರು.

ಇಂದು ಹಾಸನದಲ್ಲಿ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಎಟಿ ರಾಮಸ್ವಾಮಿ ಅವರು ‘ನಾನು ಆಡಿದ ಮಾತಿನಂತೆ ನಡೆದುಕೊಂಡಿದ್ದೇನೆ. ನನ್ನ ನಡೆಯಿಂದ ಯಾರಿಗಾದರೂ ಬೇಜಾರಾಗಿದ್ದರೆ ಕ್ಷಮಿಸಿ, ಈಗ ರಾಜಕಾರಣದಲ್ಲಿ ಮೌಲ್ಯ ಇಲ್ಲವಾಗಿದೆ, ರಾಜಕೀಯ ಒಂದು ವ್ಯಾಪಾರ ಆಗಿದೆ. ಕೆಲವರು ಐವತ್ತು ಕೋಟಿವರೆಗೂ ಬಂಡವಾಳ ಹೂಡಲು ಹೊರಟಿದ್ದಾರೆ. ಬಂಡವಾಳ ಹೂಡಿದ ಮೇಲೆ ಅದನ್ನು ವಾಪಸ್ ಕೂಡ ಪಡೆಯ ಬೇಕಾಗುತ್ತೆ. ಈ ರಾಜಕೀಯ ವ್ಯವಸ್ಥೆ ಬದಲಾಗಬೇಕಿದೆ ಎಂದರು.

ಚುನಾವಣಾ ಆಯೋಗ ಕೂಡ ಕಟ್ಟು ನಿಟ್ಟಿನ ಕ್ರಮ ವಹಿಸಬೇಕಿದೆ. ಇದನ್ನ ಮಾಡದೆ ಹೋದರೆ ಪ್ರಜಾಪ್ರಭುತ್ವ ಬಲಾಢ್ಯರ ಪಾಲಾಗುತ್ತೆ. ನಾನು ಎಂದೂ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಚುನಾವಣೆಯಲ್ಲಿ ಎರಡು ಸಿಸಿ ಕೆಲಸ ಮಾಡುತ್ತೆ, ಒಂದು ಕ್ಯಾಸ್ಟ್ ಮತ್ತು ಕ್ಯಾಸ್ ಈ ಎರಡು ಪ್ರಭಾವ ಬೀರದಂತೆ ಮಾಡಿದರೆ ಪ್ರಜಾಪ್ರಭುತ್ವ ಮತ್ತಷ್ಟು ಎತ್ತರಕ್ಕೆ ಹೋಗುತ್ತದೆ. ನನ್ನ ಅಭಿಮಾನಿಗಳು ಬೆಂಬಲಿಗರು ಯಾರು ಕೂಡ ಅಪಾರ್ಥ ಮಾಡಿಕೊಳ್ಳಬೇಡಿ. ನನಗೆ ಟಿಕೇಟ್ ಸಿಗಲಿಲ್ಲ ಎಂದು ನಡೆಯುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಎಟಿ ರಾಮಸ್ವಾಮಿ ಮನವಿ ಮಾಡಿದ್ದಾರೆ.

ನನಗೆ ಸಿಎಂ ಯಡಿಯೂರಪ್ಪ, ಶೋಭ ಕರಂದ್ಲಾಜೆ ಅವರೆಲ್ಲ ನನಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿ ಸ್ಪರ್ಧೆ ಮಾಡುವುದಕ್ಕೆ ಹೇಳಿದ್ದರು. ಕೆಲವರು ನನಗೆ ಟಿಕೆಟ್ ಕೊಡಿ, ಮಕ್ಕಳಿಗೆ ಕೊಡಿ ಎಂದು ಕೇಳುತ್ತಾರೆ ನಿಮ್ಮದು ವಿಶೇಷ ಎಂದು ಅವರು ಹೇಳಿದ್ದರು. ನಾನು ರಾಜಕೀಯದಿಂದ ತಟಸ್ಥನಾಗಿರಬೇಕು ಎನ್ನುವ ಭಾವನೆ ಇತ್ತು, ಆದರೆ ನನ್ನ ಹಿತೈಷಿಗಳ, ಬೆಂಬಲಿಗರ ರಕ್ಷಣೆಗಾಗಿ ಕೆಲಸ ಮಾಡಲು‌ ಒಂದು ಪಕ್ಷ ಸೇರಲು ರೆಡಿಯಾಗಿದ್ದೇನೆ ಎಂದಿದ್ದಾರೆ.

error: Content is protected !!