ಕೂಗು ನಿಮ್ಮದು ಧ್ವನಿ ನಮ್ಮದು

ವಿವಾಹಿತ ಮಹಿಳೆ ಕೊಲೆಗೈದು ವ್ಯಕ್ತಿ ಆತ್ಮಹತ್ಯೆ: ಅಸಲಿ ಕಾರಣ ಏನ್ ಗೊತ್ತಾ..!

ಮಂಗಳೂರು: ಯುವಕನೊಬ್ಬ ವಿವಾಹಿತ ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ನಡೆದಿದೆ. ರೇಖಾ (39) ಹಾಗೂ ಹೂವಿನ ವ್ಯಾಪಾರಿಯಾಗಿದ್ದ ವಸಂತ (42) ಮೃತರು. ರೇಖಾ ಸುರತ್ಕಲ್ ನ ಎಂ.ಆರ್.ಪಿ.ಎಲ್ ಕಾಲನಿ ನಿವಾಸಿಯಾಗಿದ್ದು, ಈ ಇಬ್ಬರ ನಡುವಿನ ಪರಿಚಯ ಪ್ರೇಮಕ್ಕೆ ತಿರುಗಿತ್ತು.‌ ನಂತರ ವಸಂತ್, ರೇಖಾಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದರೆ ರೇಖಾ ಮಾತ್ರ ವಿವಾಹಕ್ಕೆ ಒಪ್ಪಿರಲಿಲ್ಲ. ಇನ್ನು ಕುಳಾಯಿ ಬಳಿ ವಸಂತ್ ಬಾಡಿಗೆ ಮನೆ ಹೊಂದಿದ್ದಾನೆ. ಅಲ್ಲಿಗೆ ರೇಖಾಳನ್ನು ಕರೆಸಿಕೊಂಡಿದ್ದು ಅಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಅದೇ ಜಗಳ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ವಂಸತ್‌ ರೇಖಾಳನ್ನು ಕೊಲೆ ಮಾಡಿ ನಂತರ ದಿಕ್ಕು ತೋಚದೆ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇನ್ನು ರೇಖಾ ನಾಪತ್ತೆಯಾದ ಬಗ್ಗೆ ನಿನ್ನೆ ಆಕೆಯ ಗಂಡ ಅಶೋಕ್ ಭಂಡಾರಿ ಸುರತ್ಕಲ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು.

ಇದೇ ವೇಳೆ, ಕುಳಾಯಿಯಲ್ಲಿರುವ ವಸಂತ್ ಬಾಡಿಗೆ ಮನೆಯಲ್ಲಿ ಇಬ್ಬರ ಮೃತದೇಹ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಒಳಗಿನಿಂದ ಲಾಕ್ ಆಗಿದ್ದ ಮನೆಯ ಬಾಗಿಲನ್ನು ಪೊಲೀಸರು ಒಡೆದು ನೋಡಿದಾಗ ರೇಖಾಳನ್ನು ಭೀಕರವಾಗಿ ಹತ್ಯೆ ಮಾಡಿದ್ದು ಕಂಡುಬಂದಿದೆ.‌ ಸುರತ್ಕಲ್‌ನಲ್ಲಿ ಏಳೆಂಟು ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದ ವಸಂತ್ ಅಲ್ಲಿನ ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ ವ್ಯಕ್ತಿ. ಅಲ್ಲದೇ ರೇಖಾ ನಿತ್ಯ ಹೂವು ಖರೀದಿಸಲೆಂದು ಬರುತ್ತಿದ್ದರು. ಇವರ ನಡುವೆ ಯಾವ ರೀತಿಯ ಸಂಬಂಧ ಇತ್ತು ಎನ್ನುವುದು ಅಲ್ಲಿನವರಿಗೆ ಏನೂ ಗೊತ್ತಿಲ್ಲ. ಆದರೆ ಯಾತಕ್ಕಾಗಿ ಈ ಕೊಲೆ ಮಾಡಿದ್ದಾನೆ ಎನ್ನುವ ವಿಚಾರ ಸುರತ್ಕಲ್ ಭಾಗದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತು ಪ್ರಕರಣ ದಾಖಲಿಕೊಂಡ ಸುರತ್ಕಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!