ಕೂಗು ನಿಮ್ಮದು ಧ್ವನಿ ನಮ್ಮದು

ಲೇಡಿ ಸಬ್‌ ಇನ್ಸ್‌ಪೆಕ್ಟರ್ ಜತೆ ಲವ್ವಿಡವ್ವಿ, ಜೆಡಿಎಸ್ ಮುಖಂಡನ ಪುತ್ರ ನೇಣಿಗೆ ಶರಣು

ಮೈಸೂರು: ಲೇಡಿ ಸಬ್‌ ಇನ್ಸ್‌ಪೆಕ್ಟರ್ ಜತೆ ಲವ್ವಿಡವ್ವಿ ಹಿನ್ನೆಲೆ ಮೈಸೂರಿನಲ್ಲಿ ಜೆಡಿಎಸ್ ಮುಖಂಡನ ಪುತ್ರ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಜೆಡಿಎಸ್ ಮುಖಂಡ ಮೈಸೂರಿನ ಬೆಳವಾಡಿ ಶಿವಮೂರ್ತಿ ಪುತ್ರ ಪ್ರದೀಪ್ ನೇಣಿಗೆ ಶರಣಾಗಿದ್ದು, ಮೈಸೂರು ಬೋಗಾದಿ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ರಾತ್ರಿ ಪ್ರದೀಪ್ ಮತ್ತು ಲೇಡಿ ಸಬ್‌ ಇನ್ಸ್‌ಪೆಕ್ಟರ್ ಭೇಟಿಯಾಗಿದ್ದರು ಎನ್ನಲಾಗಿದ್ದು, ಭೇಟಿ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ನಡುವೆ ಗಲಾಟೆ ಆಗಿತ್ತು ಎನ್ನಲಾಗಿದೆ. ಗಲಾಟೆಯಿಂದ ಬೇಸತ್ತು ಪ್ರದೀಪ್ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯಿದೆ.

ಮೃತ ಪ್ರದೀಪ್ ಗೆ ಈಗಾಗಲೇ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಪ್ರದೀಪ್ ತಾಯಿ ಭಾಗ್ಯ ಜಿಪಂ ಮಾಜಿ ಅಧ್ಯಕ್ಷೆಯಾಗಿದ್ದು, ತಂದೆ ಶಿವಮೂರ್ತಿ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಮುಖಂಡರಾಗಿದ್ದಾರೆ.

ಇನ್ನು ಲವ್ವಿ ಡವ್ವಿ ಬಗ್ಗೆ ಪ್ರದೀಪ್ ಕುಟುಂಬಸ್ಥರಿಗೂ ಲೇಡಿ ಸಬ್ ಇನ್ಸ್ ಪೆಕ್ಟರ್ ನಡುವೆ ಹಲವು ಬಾರಿ ಗಲಾಟೆ ಸಹ ಆಗಿತ್ತು ಎನ್ನಲಾಗಿದೆ. ಅಲ್ಲದೇ ಮೃತ ಪ್ರದೀಪ್ ಗೂ ಮುನ್ನ ಈ ಲೆಡಿ ಸಬ್ ಇನ್ಸ್ ಪೆಕ್ಟರ್, ಬೇರೊಬ್ಬ ಇನ್ಸ್ ಪೆಕ್ಟರ್ ಜೊತೆಗೂ ಸಂಬಂಧ ಹೊಂದಿದ್ದರು ಎನ್ನಲಾಗುತ್ತಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

error: Content is protected !!