ಚಿಕ್ಕೋಡಿ: ಕಬ್ಬು ತುಂಬಿದ ಟ್ರ್ಯಾಲಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದ ಶಿವಪ್ಪ ಬಸರಗಿ (58) ವೃತ ದುರ್ದೈವಿ. ಈತ ಮೋಳೆ ಗ್ರಾಮದಿಂದ ಕೃಷ್ಣಾ ಕಿತ್ತೂರ ಗ್ರಾಮಕ್ಕೆ ತೆರಳುವಾಗ ದಾರಿ ಮದ್ಯದಲ್ಲಿ ಕಬ್ಬು ತುಂಬಿದ ಟ್ರ್ಯಾಲಿ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಇತನನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಕರೆದೊಯುವಾಗ ದಾರಿ ಮದ್ಯದಲ್ಲಿಯೇ ಸಾವನಪ್ಪಿದ್ದಾನೆ. ಬೈಕ್ ಹಿಂಬದಿ ಕುಳತಿದ್ದ ಮಹಾದೇವ ಅರ್ಜುನವಾಡ ಗೆ (56) ಸ್ವಲ್ಪ ಮಟ್ಟಿಗೆ ಗಾಯಗಳಾಗಿದ್ದು ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಾಗವಾಡ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.