ಬೆಳಗಾವಿ: ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಜಿಲ್ಲೆಯ ಬೈಲಹೊಂಗಲ ತಲುಪಿದಾಗ ಭಾರೀ ಜನಸ್ತೋಮ ನೆರೆದಿತ್ತು. ಜನರನ್ನು ಉದ್ದೇಶಿಸಿ ಮಾತಾಡಿದ ಯಡಿಯೂರಪ್ಪನವರು, ಎಲ್ಲರೂ ಬಿಜೆಪಿ ಅಭ್ಯರ್ಥಿಯ ಪರ ಮತ ಚಲಾಯಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಠೇವಣಿ ಕಳೆದುಕೊಳ್ಳುವಂತೆ ಮಾಡಬೇಕೆಂದು ಹೇಳಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಅದ್ಭುತವೆನಿಸುವ ಪ್ರಗತಿ ಸಾಧಿಸುತ್ತಿದೆ.
ಅಮಿತ್ ಶಾ ಅವರ ರಾಜ್ಯಕ್ಕೆ ಬಂದಾಗಲೂ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದ ಅವರು ಸಿದ್ದರಾಮಯ್ಯನವರೇ, ಇನ್ಮು ನಿಮ್ಮ ಆಟ ನಡೆಯದು, ನಿಮ್ಮ ರಾಜಕೀಯ ದೊಂಬರಾಟಕ್ಕೆ ಇತಿಶ್ರೀ ಹೇಳಿಬಿಡಿ ಎಂದರು.