ಚಿಕ್ಕಮಗಳೂರು: ನಾಳೆಯಿಂದ ಸರ್ಕಾರಿ ನೌಕರರು ಮುಷ್ಕರ ಆರಂಭಿಸಲಿ ನಿರ್ಧರಿಸಿರುವುದು ಸರ್ಕಾರದ ಸ್ವಯಂಕೃತ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಚಿಕ್ಕಮಗಳೂರಲ್ಲಿ ಇಂದು ಮಾತಾಡಿದ ಕುಮಾರಸ್ವಾಮಿಯವರು 7 ನೇ ವೇತನ ಆಯೋಗ ರಚಿಸಿದ ಬಳಿಕ ಅದು ನೀಡಿದ ಶಿಫಾರಸ್ಸುಗಳನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಬಜೆಟ್ ಮಂಡಿಸುವಾಗ ಘೋಷಣೆ ಮಾಡಬೇಕಿತ್ತು ಮತ್ತು ಅದಕ್ಕಾಗಿ ಹಣ ತೆಗೆದಿರಿಸಬೇಕಿತ್ತು.
ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೆ ಮಾಡದೆ, ಅಸ್ಪಷ್ಟ ಉತ್ತರಗಳನ್ನು ನೀಡುತ್ತಿದ್ದಾರೆ. ಅವರ ನಿರ್ಲಿಪ್ತ ಪ್ರತಿಕ್ರಿಯೆಯಿಂದ ರೊಚ್ಚಿಗೆದ್ದಿರುವ ಸರ್ಕಾರಿ ನೌಕರರು ಮುಷ್ಕರ ಹೂಡಲು ನಿರ್ಧರಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.