ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಕೋವಿಡ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲವೇ.!? ಸರ್ಕಾರಿ ವೈದ್ಯ ಬಿಚ್ಚಿಟ್ಟ ಸತ್ಯವೇನು.? ಆರೋಗ್ಯ ಸಚಿವರೇ ಬೆಳಗಾವಿ ಕಡೆಗೊಮ್ಮೆ ತಿರುಗಿ ನೋಡಿ

ಬೆಳಗಾವಿ: ಬೆಳಗಾವಿ ಜನತೆಯನ್ನ ಸರ್ಕಾರಿ ವೈದ್ಯನೊಬ್ಬನ ಮಾತು ಬೆಚ್ಚಿ ಬೀಳಿಸಿದೆ. ಈ ವೈದ್ಯನ ಮಾತಿನಿಂದ ಬೆಳಗಾವಿ ಕೋವಿಡ್ ಆಸ್ಪತ್ರೆಯಲ್ಲಿ ಯಡವಟ್ಟು ಮಾಡಲಾಗ್ತಿದೆಯಾ? ಸೂಕ್ತ ಚಿಕಿತ್ಸೆ ನೀಡುತ್ತಿಲ್ಲವಾ? ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಸೇರಿದಂತೆ ಜಿಲ್ಲೆಯ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಕೊರೊನಾಗೆ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಬಿಮ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಸ್ವತಃ ಸರ್ಕಾರಿ ವೈದ್ಯ ಕಹಿ ಸತ್ಯ ಕಕ್ಕಿದ್ದಾನೆ. ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯನ್ನ ಬೆಳಗಾವಿ ಬಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಗಿತ್ತು. ಅಲ್ಲಿ ಮಹಿಳೆಯನ್ನು ತಪ್ಪಾಗಿ ಕೋವಿಡ್ ವಾರ್ಡ್ ಗೆ ಹಾಕಲಾಗಿದೆ ಎಂದ ಈ ವೈದ್ಯ ಮಹಾಶಯನ ಮಾತು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. https://secureservercdn.net/160.153.137.210/u4a.d27.myftpupload.com/wp-content/uploads/2020/07/VID-20200707-WA0015.mp4?time=1594270848ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಮಹಾಶಯ ಬಾಲಕುಮಾರ್ ಲಮಾಣಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕೋವಿಡ್ ನಿಂದ ಮೃತಪಟ್ಟ ಮಹಿಳೆ ಹೆಸರನ್ನು ಬಹಿರಂಗ ಪಡಿಸಿದ್ದಾನೆ. ಶಂಕಿತ ಅಥವಾ ಸೋಂಕಿತರ ಹೆಸರು ಬಹಿರಂಗ ಪಡಿಸಬಾರದು ಎಂಬ ನಿಯಮವಿದ್ದರು, ನಿಯಮ ಗಾಳಿಗೆ ತೂರಿ ಹೆಸರು ಬಹಿರಂಗ ಪಡಿಸಿದ ಈ ವೈದ್ಯ ಮಹಾಶಯನ ಹೇಳಿಕೆ ಮೃತ ಮಹಿಳೆಯ ಕುಟುಂಬದ ತೆಜೋವಧೆಗೆ ಕಾರಣವಾಗಿದೆ. ವೈದ್ಯ ಬಾಲಕುಮಾರ್ ಲಮಾಣಿ ಖುದ್ದು ವಿಡಿಯೋ ಮಾಡಿ, ತಮ್ಮದೇ ಇಲಾಖೆ ಮೇಲೆ ಆರೋಪ ಮಾಡಿದ್ದರೂ ಆರೋಗ್ಯ ಇಲಾಖೆ ಕೇವಲ ನೋಟಿಸ್ ನೀಡಿ ಕೈತೊಳೆದುಕೊಂಡಿದೆ. ಪ್ರಕರಣ ಇಷ್ಟೊಂದು ಗಂಭೀರವಾಗಿದ್ದರೂ ಆರೋಗ್ಯ ಸಚಿವರು, ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಈ ವಿಚಾರದಲ್ಲಿ ತುಟಿ ಪಿಟಕ್ ಅನ್ನದೇ ಕುಳಿತಿದ್ದು ಕೂಡಲೇ ತಪ್ಪಿತಸ್ಥ ವೈದ್ಯಾಧಿಕಾರಿ ಮೇಲೆ ಸೂಕ್ತ ಕ್ರಮದ ಜೊತೆಗೆ ಸಾರ್ವಜನಿಕ ವಲಯದಲ್ಲಿ ಮೂಡಿರುವ ಆತಂಕವನ್ನು ದೂರ ಮಾಡಬೇಕಿದೆ.

error: Content is protected !!