ವೀರೇಂದ್ರ ಪಾಟೀಲ್, ನಿಜಲಿಂಗಪ್ಪಗೆ ಕಾಂಗ್ರೆಸ್ನಿಂದ ಅಪಮಾನ’ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ವೀರೇಂದ್ರ ಪಾಟೀಲ್ ಪರಿಸ್ಥಿತಿ ಏನು ಇತ್ತು ಅಂತ ನನಗೆ ಗೊತ್ತು. ನರೇಂದ್ರ ಮೋದಿಗೆ ರಾಜಕೀಯ ಏನು ಗೊತ್ತಿಲ್ಲ.
ನಾನು ವೀರೇಂದ್ರ ಪಾಟೀಲ್ ಜೊತೆ ಶಾಸಕ ಆಗಿದ್ದವನು. ವೀರೇಂದ್ರ ಪಾಟೀಲ್ ಆರೋಗ್ಯ ಚೇತರಿಸಿಕೊಳ್ಳದ ಸ್ಥಿತಿಯಲ್ಲಿದ್ದರು. ಅದನ್ನು ಮಧ್ಯರಾತ್ರಿ ಎಲ್ಲರ ಬಳಿ ಕುಳಿತುಕೊಂಡು ಚರ್ಚಿಸಿದರು. ವೈದ್ಯರು ವೀರೇಂದ್ರ ಪಾಟೀಲ್ ಆರೋಗ್ಯ ಸರಿಯಿಲ್ಲ ಅಂದಿದ್ದರು. ಆರೋಗ್ಯ ಸರಿಯಿರದಿದ್ದಕ್ಕೆ ರಾಜೀವ್ ಗಾಂಧಿ ಕೆಳಗೆ ಇಳಿಸಿದರು. ಇಂದಿರಾ ಗಾಂಧಿ ವಿರುದ್ಧ ಸ್ಪರ್ಧಿಸಿದವರನ್ನು ಮತ್ತೆ ನಿಲ್ಲಿಸಿದ್ದರು.
ಲೋಕಸಭಾ ಚುನಾವಣೆಗೆ ನಿಲ್ಲಿಸಿ ಕೇಂದ್ರದಲ್ಲಿ ಮಂತ್ರಿ ಮಾಡಿದರು. ಮಂತ್ರಿ ಮಾಡಿದ ಹೃದಯ ಶ್ರೀಮಂತಿಕೆ ಗಾಂಧಿ ಕುಟುಂಬಕ್ಕೆ ಇತ್ತು. ನಿಜಲಿಂಗಪ್ಪಗೆ ಗೌರವ ಕೊಡಲು ಅಳಿಯನಿಗೆ MLC ಮಾಡಿದ್ವಿ. ಬಿಜೆಪಿಯವರ ಸಿಂಪತಿ ನಮಗೆ ಬೇಡ ಎಂದು ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.