ರಾಮದುರ್ಗ: ಭಾರತ ಮಹಿಳೆಯನ್ನು ಪೂಜಿಸಿ, ಆರಾಧಿಸುವ ದೇಶವಾಗಿದೆ. ದೇಶವನ್ನು ಮಾತೆಗೆ ಹೊಲಿಸಿ, ಪೂಜೆ ಸಲ್ಲಿಸುವ ಅಭಿಯಾನ ಪ್ರಾರಂಭಿಸಿದ್ದು ಶ್ಲಾಘನೀಯ. ದೇಶದ ಸಂಸ್ಕೃತಿ, ಧರ್ಮದ ಉಳಿವಿಗಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕಾದ ಅಗತ್ಯತೆ ಇದೆ ಎಂದು ಬಿಜೆಪಿ ಮುಖಂಡ ಪಿ.ಎಫ್.ಪಾಟೀಲ ಹೇಳಿದರು. ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪಯಾತ್ರೆಯ ಪ್ರಯುಕ್ತ ಗುರುವಾರ ತಾಲೂಕಿನ ಮನಿಹಾಳ ಗ್ರಾಮ ಪಂಚಾಯತಿಯಲ್ಲಿ ನ್ಯಾಯವಾದಿ ಹಾಗೂ ಬಿಜೆಪಿ ಮುಖಂಡ ಪಿ.ಎಫ್.ಪಾಟೀಲ ಅಭಿಮಾನಿ ಬಳಗದ ನೇತೃತ್ವದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಭಾರತ ಮಾತಾ ಫೋಟೋ ಪೂಜಾ ಅಭಿಯಾನ ಚಾಲನೆಯಲ್ಲಿ ಮಾತನಾಡಿದ ಅವರು, ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳ ಕೈ ಬಲಪಡಿಸಿ, ರಾಜ್ಯದಲ್ಲಿ ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕಾದಲ್ಲಿ ಬಿಜೆಜಿ ಪಕ್ಷದಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಬಾರಿ ರಾಜ್ಯಾದ್ಯಂತ 150ಕ್ಕೂ ಹೆಚ್ಚು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸನ್ನಧರಾಗಿದ್ದಾರೆ.
ರಾಮದುರ್ಗ ಮತಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಆಯ್ಕೆಗೆ ಕಾರ್ಯಕರ್ತರು ಹಾಗೂ ಮುಖಂಡರು ಉಭಯ ಸರ್ಕಾರಗಳ ಸಾಧನೆಗಳನ್ನು ಜನತೆಗೆ ತಿಳಿಸಿ ಪಕ್ಷ ಸಂಘಟಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಸುರೇಬಾನ, ಮನಿಹಾಳ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಗೆ ಬೇಟಿ ನೀಡಿ ಪಕ್ಷದಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚರ್ಚೆ ನಡಿಸಿ, ಬೂತ್ ಕಮಿಟಿಗಳನ್ನು ಬಲಿಷ್ಠಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾರುತಿ ಪ್ಯಾಟಿ, ಮೈಲಾರಪ್ಪ ಶಿರಿಯನ್ನವರ, ಪ್ರವೀಣ ಗೊಣಬಾಳ, ಪ್ರಭುಗೌಡ ಪಾಟೀಲ, ಈಶ್ವರ ಮೆಳ್ಳಿಕೇರಿ, ಚೇತನಗಾಣಿಗೇರ, ಇಮಾಮಸಾಬ ಮುಜಾವರ ಸೇರಿದಂತೆ ಪಿ.ಎಫ್.ಪಾಟೀಲ ಅಭಿಮಾನಿ ಬಳಗದವರು ಇದ್ದರು. ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳ ಕೈ ಬಲಪಡಿಸಿ, ರಾಜ್ಯದಲ್ಲಿ ಜನಪರ ಸರ್ಕಾರ ಅಧಿಕಾರಕ್ಕೆ ಬರಬೇಕಾದಲ್ಲಿ ಬಿಜೆಜಿ ಪಕ್ಷದಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಬಾರಿ ರಾಜ್ಯಾದ್ಯಂತ 150ಕ್ಕೂ ಹೆಚ್ಚು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಸನ್ನಧರಾಗಿದ್ದಾರೆ. ರಾಮದುರ್ಗ ಮತಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿ ಆಯ್ಕೆಗೆ ಕಾರ್ಯಕರ್ತರು ಹಾಗೂ ಮುಖಂಡರು ಉಭಯ ಸರ್ಕಾರಗಳ ಸಾಧನೆಗಳನ್ನು ಜನತೆಗೆ ತಿಳಿಸಿ ಪಕ್ಷ ಸಂಘಟಿಸಬೇಕು. ಪಿ.ಎಫ್.ಪಾಟೀಲ, ಬಿಜೆಪಿ ಮುಖಂಡರು.