ಕೂಗು ನಿಮ್ಮದು ಧ್ವನಿ ನಮ್ಮದು

ರಿಲ್ಯಾಕ್ಸ್ ಮೂಡಿಗೆ ಜಾರಿದ ರಾಜಹುಲಿ ಬಿ.ಎಸ್.ಯಡಿಯೂರಪ್ಪ, ಕುಟುಂಬದೊಂದಿಗೆ ಫ್ರೀಡಂ ಪಾರ್ಕ್, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭೇಟಿ

ಶಿವಮೊಗ್ಗ: ವಿಧಾನಸಭೆಗೆ ವಿದಾಯ ಭಾಷಣದ ಬಳಿಕ ರಿಲ್ಯಾಕ್ಸ್ ಮೂಡಿಗೆ ಜಾರಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಕುಟುಂಬದೊಂದಿಗೆ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ಹಾಗೂ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದರು. ಫೆ.27ರಂದು ಶಿವಮೊಗ್ಗದ ನೂತನ ಏರ್ಪೋರ್ಟ್ ಉದ್ಘಾಟನೆ ಹಿನ್ನಲೆ ಏರ್ಪೋರ್ಟ್ಗೆ ಕುಟುಂಬ ಸಹಿತ ಆಗಮಿಸಿದ ರಾಜಹುಲಿ, ನಿಲ್ದಾಣಕ್ಕೆ ಒಂದು ರೌಂಡ್ ಹಾಕಿ ತೆರಳಿದರು.

ಮಾತ್ರವಲ್ಲದೆ ಫ್ರೀಡಂ ಪಾರ್ಕ್ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡಿದ ಯಡಿಯೂರಪ್ಪ ಅವರು, ಟುವಿ, ಟುವ್ವಿ, ಹಾಡು ಸೇರಿದಂತೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ, ತಾಲಿಬಾನ್ ಅಲ್ಲ ಅಲ್ಲ ಹಾಡಿಗೆ ಸ್ಟೆಪ್ ಹಾಕಿದ ಮಕ್ಕಳ ನೃತ್ಯವನ್ನು ಕೂಡ ಅವರು ವೀಕ್ಷಿಸಿದರು.

error: Content is protected !!