ಸಿಕಂದರಾಬಾದ್ ಲೋಕಸಭಾ ಕ್ಷೇತ್ರದಾದ್ಯಂತ ಆಯೋಜಿಸಲಾಗುತ್ತಿರುವ “Healthy Baby” ಅಭಿಯಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಸಿಕಂದರಾಬಾದ್ ಲೋಕಸಭಾ ಕ್ಷೇತ್ರದಾದ್ಯಂತ ಆಯೋಜಿಸಲಾಗುತ್ತಿರುವ “Healthy Baby” ಅಭಿಯಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಅಭಿಯಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಿ, ‘ಇದು ಗಮನಾರ್ಹ ಪ್ರಯತ್ನವಾಗಿದ್ದು, ಇದರಿಂದಾಗಿ ಸಾಕಷ್ಟು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪ್ರಯೋಜವಾಗಲಿದೆ’ ಎಂದು ಉಲ್ಲೇಖಿಸಿದ್ದಾರೆ.
‘ಪೋಷಣ್ ಅಭಿಯಾನ’ ಯೋಜನೆಯಡಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮೋದಿ ಶ್ಲಾಘಿಸಿರುವ ಟ್ವೀಟ್ ಇಲ್ಲಿದೆ:
ಸಿಕಂದರಾಬಾದ್‌ನಾದ್ಯಂತ ಈ ಕಾರ್ಯಕ್ರಮವನ್ನು ಪ್ರಧಾನಿ ಮೋದಿಯವರ ಆಶಯವನ್ನು ಸಾಕಾರಗೊಳಿಸುವ ‘ಪೋಷಣ್ ಅಭಿಯಾನ’ ಯೋಜನೆಯಡಿ ಆಯೋಜಿಸಲಾಗಿದ್ದು, ಈ ಅಭಿಯಾನವು ಅಪೌಷ್ಟಿಕತೆಯನ್ನು ತೊಡೆದುಹಾಕಲು ಮತ್ತು ಪೋಷಣ್ ಅಭಿಯಾನದ ಯೋಜನೆಯಡಿಯಲ್ಲಿ ಎಲ್ಲಾ ಮಕ್ಕಳಿಗೆ ಆರೋಗ್ಯಕರ ಆಹಾರದ ಪ್ರಾಮುಖ್ಯತೆಯನ್ನು ಪ್ರದರ್ಶಿಸುವ ಹಾಗೂ ಪ್ರತಿ ಮನೆ, ಪ್ರತಿ ಮಗುವನ್ನು ತಲುಪುವ ಗುರಿಯನ್ನು ಹೊಂದಿದೆ ಎಂದು ಸಚಿವ ಜಿ ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.
ಈ ಅಭಿಯಾನ ಸಿಕಂದರಾಬಾದ್ ಸಂಸತ್ತಿನ ಕ್ಷೇತ್ರದ ಪ್ರತಿ ಬಸ್ತಿ, ಕಾಲೋನಿ ಮತ್ತು ಸೊಸೈಟಿಯಲ್ಲಿ “ಹೆಲ್ದಿ ಬೇಬಿ ಶೋ” ಗಾಗಿ ದಾಖಲಾತಿ ನಮೂನೆಗಳ ವಿತರಣೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿ, ಆರೋಗ್ಯವಂತ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಪ್ರಮಾಣ ಪತ್ರ ಮತ್ತು ಪೋಷನ್ ಕಿಟ್‌ಗಳನ್ನು ನೀಡಿ ಗೌರವಿಸಲಾಯಿತು ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ.