ನಟಿ ರಚಿತಾ ರಾಮ್ ಫೆಬ್ರವರಿ 23ರಂದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಘವೇಂದ್ರ ಸ್ವಾಮಿ ದರ್ಶನ್ ಪಡೆದರು. ಸಿನಿಮಾ ಚಿತ್ರೀಕರಣದ ನಡುವೆ ತುಸು ಬಿಡುವು ಮಾಡಿಕೊಂಡು ರಚಿತಾ ರಾಮ್ ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದು ತೀರ್ತ ಪ್ರಸಾದಗಳನ್ನು ಸ್ವೀಕರಿಸಿದ ರಚಿತಾ, ಅಲ್ಲಿಯೇ ಸಿಕ್ಕ ಅಭಿಮಾನಿಗಳೊಟ್ಟಿಗೆ ಕೆಲ ಕಾಲ ಕಳೆದರು. ಕೆಲವರೊಟ್ಟಿಗೆ ಫೊಟೊಕ್ಕೂ ಫೋಸು ನೀಡಿದರು. ವಿಶೇಷವೆಂದರೆ ಅದೇ ದಿನ ನಟ ಜಗ್ಗೇಶ್ ಹಾಗೂ ಪರಿಮಳ ಸಹ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು.
ನಟಿ ರಚಿತಾ ರಾಮ್ ಅವರು ಚಿತ್ರೀಕರಣದಿಂದ ಬಿಡುವು ಪಡೆದು ಮಂತ್ರಾಲಯಕ್ಕೆ ಭೇಟಿ ನೀಡಿ ರಾಘವೇಂದ್ರಸ್ವಾಮಿಗಳ ದರ್ಶನ ಪಡೆದರು.