ಕೂಗು ನಿಮ್ಮದು ಧ್ವನಿ ನಮ್ಮದು

ಜಗದೀಶ್ ಶೆಟ್ಟರ್ ಮಾತಿನಿಂದ ಸಿಎಂಗೆ ಇರಿಸುಮುರಿಸು: ಮುಂದಿನ ತಿಂಗಳು ವೈದ್ಯಕೀಯ ಕಾಲೇಜು ಉದ್ಘಾಟನೆಗೆ ಬೊಮ್ಮಾಯಿ ಪ್ಲ್ಯಾನ್

ಹಾವೇರಿ: ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಚಾರವಾಗಿ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ತವರು ಜಿಲ್ಲೆಯಾದ ಹಾವೇರಿ ವೈದ್ಯಕೀಯ ಕಾಲೇಜಿಗೆ ಮುಖ್ಯ ಆಡಳಿತ ಅಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಕಳೆದ ನಾಲ್ಕೈದು ದಿನಗಳಿಂದ ವೈದ್ಯಕೀಯ ಕಾಲೇಜ್ ಮುಖ್ಯಸ್ಥ ಬೆಂಗಳೂರಿನಲ್ಲೆ ಬೀಡು ಬಿಟ್ಟಿದ್ದು, ಈ ವಾರದಲ್ಲಿಯೇ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಮುಗಿಸಿ ಅಧಿಕೃತವಾಗಿ ತರಗತಿಗಳನ್ನು ನಡೆಸಲು ಮುಂದಾಗಿದ್ದಾರೆ. ಈ ಮೂಲಕ ಸಿಎಂ ಬೊಮ್ಮಾಯಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕ್ರೇಡಿಟ್ ನನಗೆ ಸಿಗಲಿ ಎಂದು ಸಿಎಂ ಪ್ಲ್ಯಾನ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದ ಜಗದೀಶ ಶೆಟ್ಟರ್
ಬಜೆಟ್ ಅಧಿವೇಶನದಲ್ಲಿ ಫೆ. 14 ರಂದು ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಚಾರವಾಗಿ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ವತಃ ಅಸಮಾಧಾನ ವ್ಯಕ್ತಪಡಿಸಿದ್ದರು. ನಗರದಲ್ಲಿ ಆರಂಭಿಸಲಾಗಿರುವ ವೈದ್ಯಕೀಯ ಕಾಲೇಜಿನಲ್ಲಿ ಸಿಬ್ಬಂದಿ ಹಾಗೂ ಆಡಳಿತ ವ್ಯವಸ್ಥೆ ಸರಿ ಇಲ್ಲ, ಕಾಲೇಜಿನಲ್ಲಿ 70 ಖಾಲಿ ಹುದ್ದೆ ತುಂಬಬೇಕು.‌ಆದರೆ ಇನ್ನೂ ನೇಮಕಾತಿ ಆಗಿಲ್ಲ. ಹೀಗಾದರೆ ಸುಧಾಕರ್ ಅವರ ಉತ್ತಮ ಕಾರ್ಯಕ್ಷಮತೆ ಬಗ್ಗೆ ತಪ್ಪು ಸಂದೇಶ ಹೋಗುತ್ತದೆ. ಮುಖ್ಯಮಂತ್ರಿ ಇರುವ ಜಿಲ್ಲೆಯಲ್ಲಿ ನೇಮಕಾತಿ‌ ಏಕಾಗಿಲ್ಲ, ಅಧಿವೇಶನದ ಮುಗಿಯುವ ಮೊದಲು ನೇಮಕಾತಿ ಮಾಡಿ ಎಂದು ಒತ್ತಾಯಿಸಿದ್ದರು.
ವೈದ್ಯಕೀಯ ಕಾಲೇಜಿನ ಕ್ರೆಡಿಟ್ ಪಡೆಯಲು ಸಿಎಂ ಪ್ಲ್ಯಾನ್

ವೈದ್ಯಕೀಯ ಕಾಲೇಜ್ ಕಟ್ಟಡ ನಿರ್ಮಾಣ ಕಾರ್ಯ ಇನ್ನೂ ಪೂರ್ಣ ಆಗದೆ ಇದ್ರೂ, ಮುಂದಿನ ತಿಂಗಳು ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜ್ ಉದ್ಘಾಟನೆಯನ್ನ ಸಿಎಂ ಬೊಮ್ಮಾಯಿಯವರು ಮಾಡಲಿದ್ದಾರೆ. ಕಾಲೇಜು ಕಟ್ಟಡ ಪೂರ್ಣ ಆಗಲು ಇನ್ನೂ 6 ತಿಂಗಳು ಅವಕಾಶ ಬೇಕಾಗುತ್ತದೆ. ವಿಧಾನಸಭೆ ಚುನಾವಣೆ ಬಳಿಕ ಯಾರೂ ಸಿಎಂ ಆಗುತ್ತಾರೋ ಗೊತ್ತಿಲ್ಲ. ಹೀಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಕ್ರೇಡಿಟ್ ನನಗೆ ಸಿಗಲಿ ಎಂದು ಸಿಎಂ ಪ್ಲ್ಯಾನ್ ಮಾಡಿದ್ದಾರೆ.

ಒಂದು ವರ್ಷದೊಳಗೆ ಕಟ್ಟಡ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ಸಿಎಂ ಬೊಮ್ಮಾಯಿ ಕೊಟ್ಟಿದ್ದರು. ಆದರೆ ಬೊಮ್ಮಾಯಿ ಸೂಚನೆಯಂತೆ 1 ವರ್ಷದಲ್ಲಿ ಕಟ್ಟಡ ಪೂರ್ಣ ಮಾಡೊಕೆ ಸಾಧ್ಯ ಆಗಿಲ್ಲ. ಕಾಲೇಜ್ ಕಟ್ಟಡ ನಿರ್ಮಾಣ ಬೇಗ ಮುಗಿಸಲು ಜಿಲ್ಲಾ ಪಂಚಾಯತಿ ಸಿಇಓವನ್ನು ನೋಡಲ್ ಆಫಿಸರ್ ಆಗಿ ನೆಮಿಸಿದ್ದರು. ಕನಿಷ್ಠ ಪಕ್ಷ ಮೊದಲನೆ ವರ್ಷದ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕ್ಲಾಸ್ ರೂಂ ಹಾಗೂ ಲ್ಯಾಬ್ ವ್ಯವಸ್ಥೆ ಮಾಡಲು ತಿಳಿಸಿದ್ದಾರೆ. ಇನ್ನು 10 ದಿನದಲ್ಲಿ ಪೂರ್ತಿ ಮಾಡುವಂತೆ ವೈದಕೀಯ ಶಿಕ್ಷಣ ಇಲಾಖೆಯ ಪ್ರಿನ್ಸಿಪಲ್ ಸೆಕ್ರಟರಿ ಸೂಚಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ ಮೊದಲ ವಾರದಲ್ಲೆ ಉದ್ಘಾಟನೆ ಮಾಡಲಿದ್ದಾರೆ.

ಕಳೆದ ವರ್ಷದಿಂದ ವೈದ್ಯಕೀಯ ಕಾಲೇಜು ಆರಂಭ ಆಗಿರುವುದರಿಂದ. ಪ್ರಸಕ್ತ ಪ್ರಥಮ ವರ್ಷದ 198 ವಿದ್ಯಾರ್ಥಿಗಳಷ್ಟೇ ಇಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಮೊದಲ ವರ್ಷದ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಅವಶ್ಯವಿರುವ ಕ್ಲಾಸ್​ ರೂಂ ನಿರ್ಮಾಣ ಮಾಡಲಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ಶಿಕ್ಷಕರಿಲ್ಲದೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ವಾರಕೊಮ್ಮೆ ಮಾತ್ರ ಮೆಡಿಕಲ್ ವಿದ್ಯಾರ್ಥಿಗಳಿಗೆ ಕ್ಲಾಸ್ ನಡೆಯುತ್ತಿತ್ತು.

error: Content is protected !!