ಬೆಂಗಳೂರು: ಮಹಿಳಾ ಅಧಿಕಾರಿ ರೋಹಿಣಿ ಮತ್ತು ಡಿ.ರೂಪಾ ವಾರ್ ವಿಚಾರವಾಗಿ ರೂಪಾ ಫೇಸ್ ಬುಕ್ಕಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ದಯವಿಟ್ಟು ನಾನು ಹೇಳಿರುವ ಭ್ರಷ್ಟಾಚಾರದ ವಿಷಯದ ಬಗ್ಗೆ ಚರ್ಚೆ ಆಗಲಿ ಎಂದು ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಹೋರಾಡುವ ಯಾರನ್ನು ನಾನು ತಡೆದಿಲ್ಲ. ಇದೇ ವೇಳೆ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡುವುದಾದರೆ ಕರ್ನಾಟಕದಲ್ಲಿ ಓರ್ವ ಐಎಎಸ್ ಅಧಿಕಾರಿ, ತಮಿಳುನಾಡಿನಲ್ಲಿ ಒಬ್ಬ ಕನ್ನಡದ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಒಬ್ಬ ಐಎಎಸ್ ಪತಿ-ಪತ್ನಿ ವಿಚ್ಛೇದನ ಪಡೆದಿದ್ದಾರೆ.
ಆದರೆ ಇನ್ನೂ ನಾನು ಮತ್ತು ನನ್ನ ಪತಿ ಇನ್ನೂ ಒಟ್ಟಿಗೆ ಇದ್ದೇವೆ. ನಾವು ಇನ್ನೂ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಎಂದು ಪೋಸ್ಟ್ ನಲ್ಲಿ ಹೇಳಿದ್ದಾರೆ.
ನಾವು ಇನ್ನೂ ಕುಟುಂಬವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಯಾರು? ಅವರನ್ನು ಈ ವಿಚಾರವಾಗಿ ಪ್ರಶ್ನಿಸಿ. ಇಲ್ಲದಿದ್ದರೆ ಇನ್ನೂ ಹಲವು ಕುಟುಂಬಗಳು ನಾಶವಾಗುತ್ತವೆ ಎಂದು ಹೇಳಿದ್ದಾರೆ. ನಾನು ಧೈರ್ಯವಂತ ಮಹಿಳೆ, ನಾನು ಹೋರಾಡುತ್ತೇನೆ. ಎಲ್ಲಾ ಮಹಿಳೆಯರಿಗೆ ಹೋರಾಡುವ ಶಕ್ತಿ ಇರುವುದಿಲ್ಲ. ದಯವಿಟ್ಟು ಅಂತಹ ಮಹಿಳೆಯರಿಗೆ ಧ್ವನಿಯಾಗಿರಿ ಎಂದು ರೂಪಾ ರೋಹಿಣಿ ವಿರುದ್ಧ ಕಿಡಿಕಾರಿದ್ದಾರೆ