ನವದೆಹಲಿ: ಟರ್ಕಿಯಲ್ಲಿ ಭಾರತದ ರಕ್ಷಣಾ ತಂಡ ನಡೆಸಿದ ನಿಸ್ವಾರ್ಥ ಸೇವೆಯನ್ನು ಇಡೀ ವಿಶ್ವವೇ ಕೊಂಡಾಡಿದೆ. ಕಳೆದ 10 ದಿನಗಳಿಂದ ಟರ್ಕಿಯಲ್ಲಿ ರಕ್ಷಣಾ ಕಾರ್ಯ, ನೆರವಿನಲ್ಲಿ ತೊಡಗಿದ ಎನ್‌ಡಿಆರ್‌ಎಫ್,ಭಾರತೀಯ ಸೇನೆ, ವಾಯುಸೇನೆ ಸೇರಿದಂತೆ ಎಲ್ಲಾ ತಂಡಕ್ಕೆ ನನ್ನ ಸಲ್ಯೂಟ್ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟರ್ಕಿ ಭೂಕಂಪದ ಬಳಿಕ ಮಾನವೀಯತೆ ಆಧಾರದಲ್ಲಿ ನೆರವಿಗೆ ನಿಂತ ಭಾರತದ ಎನ್‌ಡಿಆರ್‌ಎಫ್ ತಂಡವನ್ನು ದೆಹಲಿ ನಿವಾಸಕ್ಕೆ ಕರೆಸಿ ಅಭಿನಂದಿಸಿದ್ದಾರೆ. ಬಳಿಕ ಮಾತನಾಡಿದ ಮೋದಿ, ಇಡೀ ದೇಶ ನಿಮ್ಮ ನಿಸ್ವಾರ್ಥ ಸೇವೆಗೆ ಹೆಮ್ಮೆ ಪಡುತ್ತಿದೆ ಎಂದರು.
ಗುಜರಾತ್ ಭೂಕಂಪದ ಸಂದರ್ಭದಲ್ಲಿ ನಾವು ಇದೇ ಪರಿಸ್ಥಿತಿಯನ್ನು ಅನಭವಿಸಿದ್ದೇವೆ. ಅವಶೇಷಗಳಡಿಯಲ್ಲಿ ಸಿಲುಕಿದವರನ್ನು ಸುರಕ್ಷಿತವಾಗಿ ರಕ್ಷಿಸುವುದು ಅತ್ಯಂಕ ಕಷ್ಟದ ಕೆಲಸವಾಗಿತ್ತು. ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ರಕ್ಷಣಾ ಕಾರ್ಯಗಳು ನಡೆಯುತ್ತಿತ್ತು. ಊಟಕ್ಕೆ ಪರದಾಡ, ತಮ್ಮವರನ್ನು ಕಳೆದುಕೊಂಡ ನೋವು ಎಲ್ಲವನ್ನೂ ನೋಡಿದ್ದೇನೆ. ನಾನೊಬ್ಬ ಸ್ವಯಂ ಸೇವಕನಾಗಿ ಸ್ಥಳಲ್ಲಿದ್ದೆ. ಹೀಗಾಗಿ ನೀವು ಟರ್ಕಿಯಲ್ಲಿನ ರಕ್ಷಣಾ ಕಾರ್ಯದ ಪ್ರತಿ ನಿಮಿಷವನ್ನು ನಾನು ಫೀಲ್ ಮಾಡುತ್ತಿದ್ದೆ. ನಿಮ್ಮ ಸೇವೆಯನ್ನು ನಾನು ಹೆಮ್ಮೆಯಿಂದ ಗೌರವಿಸುತ್ತೇನೆ. ಇಂದು ನಾನು ನಿಮಗೆ ಸಲ್ಯೂಟ್ ಹೊಡೆಯುತ್ತೇನೆ ಎಂದಿದ್ದಾರೆ.

ನಿಸ್ವಾರ್ಥ ಸೇವೆಗೆ ನನ್ನ ಸಲಾಂ. ತಿರಂಗ ಹಿಡಿದು ನಾವು ಎಲ್ಲಿಗೆ ತೆಳಿದರೂ ಅಲ್ಲಿನ ಜನರಿಗೆ, ಸರ್ಕಾರಕ್ಕೆ ವಿಶ್ವಾಸ ಮೂಡುತ್ತದೆ. ನಮ್ಮ ಧ್ವಜ ನೋಡಿದರೆ ಅಲ್ಲಿನ ಜನರಲ್ಲಿ ಒಂದು ವಿಶ್ವಾಸ ಮೂಡುತ್ತದೆ. ಎಲ್ಲವೂ ಸರಿಹೋಗಲಿದೆ ಅನ್ನೋ ವಿಶ್ವಾಸ ಮೂಡುತ್ತದೆ. ಸಿರಿಯಾ, ಉಕ್ರೇನ್, ಆಫ್ಘಾನಿಸ್ತಾನದಿಂದ ಭಾರತೀಯ ರಕ್ಷಣ ವೇಳೆಯೂ ನಮ್ಮ ತಂಡ ಕಾರ್ಯನಿರ್ವಹಿಸಿದೆ. ಭಾರತ ತಂಡ ಎಲ್ಲಿಗೆ ತೆರಳಿದರೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಉಕ್ರೇನ್, ಸಿರಿಯಾ, ಆಫ್ಘಾನ್ ಸೇರಿದಂತೆ ಹಲವು ದೇಶಗಳಲ್ಲಿ ಭಾರತ ಆಪರೇಶನ್ ನಡೆಸಿ ಸಂಕಷ್ಟದಿಂದ ಭಾರತೀಯರನ್ನು ಕರೆತಂದಿತ್ತು. ಇದೀಗ ಆಪರೇಶನ್ ದೋಸ್ತ್ ಮಾನವೀಯತೆ ಪ್ರತೀಕ. ಯಾರೇ ಸಂಕಷ್ಟಕ್ಕೆ ಸಿಲುಕಿದರೂ ಭಾರತ ನೆರವು ನೀಡಲಿದೆ. ನೇಪಾಳ ಸೇರಿದಂತೆ ಹಲವು ಭೂಕಂಪದಲ್ಲಿ ಭಾರತ ನೆರವು ನೀಡಿದೆ. ಇದರಿಂದ ಎನ್‌ಡಿಆರ್‌ಎಫ್ ಮೇಲಿನ ವಿಶ್ವಾಸ ವಿಶ್ವದಲ್ಲೇ ಹೆಚ್ಚಾಗಿದೆ ಎಂದು ಮೋದಿ ಹೇಳಿದ್ದಾರೆ.
ಸ್ಲೈಕ್ಲೋನ್, ಪ್ರವಾಹ ಅಥವಾ ಭೂಕಂಪ, ಯಾವುದೇ ಸಂದರ್ಭದಲ್ಲಿ ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿದೆ ಎಂದು ಜನರ ವಿಶ್ವಾಸ ಹೆಚ್ಚಾಗುತ್ತದೆ. ಎಲ್ಲವನ್ನೂ NDRF ತಂಡ ಯಶಸ್ವಿಯಾಗಿ ನಿರ್ವಹಿಸುತ್ತದೆ. NDRF ತಂಡದ ನಿಸ್ವಾರ್ಥ ಸೇವೆಯಿಂದ ಭಾರತ ಸುರಕ್ಷಿತವಾಗಿದೆ. ನಮ್ಮ ಶಕ್ತಿಯನ್ನು ಮತ್ತಷ್ಟು ವೃದ್ಧಿಸಬೇಕು. ಅತ್ಯಂತ ದೊಡ್ಡ ಭೀಕರ ಭೂಕಂಪದಲ್ಲಿ ನಮ್ಮ ತಂಡದ ಕಾರ್ಯಕ್ಕೆ ವಿಶ್ವದೆಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿ ಘಟನೆಯಲ್ಲಿ ನಾವು ಅತೀ ಹೆಚ್ಚು ವಿಷಯಗಳನ್ನು ಕಲಿಯುತ್ತೇವೆ. ಇಂತಹ ಕಠಿಣ ಪರಿಸ್ಥಿತಿಯನ್ನು NDRF ತಂಡ ನಿಭಾಯಿಸಿದ್ದು ಹೇಗೆ? ಇವೆಲ್ಲವನ್ನೂ ಡಾಕ್ಯುಮೆಂಟ್ ಮಾಡಬೇಕು ಎಂದು ಮೋದಿ ಸಲಹೆ ನೀಡಿದರು.
ಇದೇ ಮೊದಲ ಬಾರಿಗೆ NDRF ಮಹಿಳಾ ತಂಡ ಕೂಡ ಟರ್ಕಿಗೆ ತೆರಳಿತ್ತು. ಮಹಿಳಾ ತಂಡದಿಂದ ಅಲ್ಲಿನ ನಾಗರೀಕರ ವಿಶ್ವಾಸ ಹೆಚ್ಚಾಗಿತ್ತು. ನಮ್ಮ ಮಹಿಳಾ ತಂಡದ ಜೊತೆ ಅಲ್ಲಿನ ಹಲವು ನಾಗರೀಕರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಅಲ್ಲಿನ ಜನರ ವಿಶ್ವಾಸವನ್ನು ನಮ್ಮ ಮಹಿಳಾ ತಂಡ ಹೇಗೆ ಗೆದ್ದಿದೆ ಅನ್ನೋದಕ್ಕೆ ಊದಾಹರಣೆಯಾಗಿದೆ ಎಂದರು.