ಕೂಗು ನಿಮ್ಮದು ಧ್ವನಿ ನಮ್ಮದು

ರಾಮನಗರದಲ್ಲಿ ರಾಮ ಮಂದಿರ ನಾನೇ ಪೂರ್ಣಗೊಳಿಸುತ್ತೇನೆ: ಬಹಿರಂಗವಾಗಿಯೇ ಮುಂದಿನ ಮುಖ್ಯಮಂತ್ರಿ ನಾನೇ ಎಂದ ಕುಮಾರಸ್ವಾಮಿ

ರಾಮನಗರ: ರಾಮನಗರದಲ್ಲಿ ರಾಮಮಂದಿರಾ ಕಟ್ಟಲು ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ನೆನಪಾಗಿದೆ. ಈ ಬಗ್ಗೆ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಇದಕ್ಕಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ. ಬಹುಶಃ ಈ ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ನನ್ನ ಮೇಲೆ ಬರಲಿದೆ. ಏಕೆಂದರೆ ಮುಂದೆ ನನ್ನ ನೇತೃತ್ವದಲ್ಲೇ ಸರ್ಕಾರ ರಚನೆಯಾಗಲಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ರಾಮನಗರದ ಚನ್ನಪಟ್ಟಣದಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಮಂದಿರ ನಿರ್ಮಾಣದ ಬಗ್ಗೆ ಇವತ್ತು ಘೋಷಣೆ ಮಾಡಿದ್ದಾರೆ ಅಷ್ಟೇ. ನಾಳೆ ಬೆಳಗ್ಗೆ ಕಟ್ಟಲು ಇವರಿಂದ ಸಾದ್ಯವಿಲ್ಲ. ಮುಂದಿನ ಸರ್ಕಾರ ಬಂದ ಮೇಲೆ ಕಾಮಗಾರಿ ಆಗಬೇಕು, ಮುಂದಿನ ಸರ್ಕಾರ ಬಿಜೆಪಿ ಬರಲ್ಲ. ಮುಂದಿನ ಸರ್ಕಾರ ನನ್ನ ನೇತೃತ್ವದಲ್ಲಿ ಇರಲಿದೆ. ಅವರ ಆಸೆಯನ್ನ ನಾನೇ ನೆರವೇರಿಸುತ್ತೇನೆ ಎಂದರು.

ಬಿಜೆಪಿಯವರಿಗೆ ಧಾರ್ಮಿಕ ವಿಚಾರ ಬಿಟ್ಟರೆ ಬೇರೆ ಮಾರ್ಗವಿಲ್ಲ. ಧಾರ್ಮಿಕ ವಿಚಾರಗಳನ್ನ ಇಟ್ಟುಕೊಂಡೇ ಅವರು ಚುನಾವಣೆಗೆ ಹೋಗುತ್ತಾರೆ. ಮೂರು ವರ್ಷದ ಹಿಂದೆ ಮಾಡಿದ್ದರೆ ಮೆಚ್ಚಿಕೊಳ್ಳುತ್ತಿದ್ದೆ. ಆದರೆ ಚುನಾವಣೆ ಸಮೀಪದಲ್ಲಿ ಘೋಷಣೆ ಮಾಡಿ ಏನು ಮಾಡಲು ಸಾಧ್ಯ ಎಂದರು. ಇದಕ್ಕಾಗಿ ದುಡ್ಡು ಎಷ್ಟು ಇಟ್ಟಿದ್ದಾರೆ? ಜಾಗದ ಅನುಮತಿ ಸಿಕ್ಕಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಮಂದಿರ ನಿರ್ಮಾಣ ವಿಚಾರದಲ್ಲಿ ಕೆಲವೊಂದು ಕಾನೂನು ಇದೆ, ಅದನೆಲ್ಲ ನಾನೇ ಮಾಡಬೇಕು. ರಾಮಮಂದಿರಾ ನಾನೇ ಕಟ್ಟುತ್ತೇನೆ. ಅವರು ಯಾಕೆ ಶ್ರಮ ತೆಗೆದುಕೊಳ್ಳುತ್ತಾರೆ. ಪ್ರಚಾರಕ್ಕಾಗಿ ಬಿಜೆಪಿ ಅವರು ಮಾಡಿಕೊಂಡಿದ್ದಾರೆ. ಸುಳ್ಳು ಪ್ರಚಾರ ಅವರ ಜಯಾಮಾನವಾಗಿದೆ. ಮಂದಿರ ನಿರ್ಣಯಕ್ಕೆ ಬಜೆಟ್ನಲ್ಲಿ ಎಷ್ಟು ಹಣ ಇಟ್ಟಿದ್ದಾರೆ? ಈ ರೀತಿಯ ಘೋಷಣೆಯಿಂದ ಜೆಡಿಎಸ್ ಕಟ್ಟಿಹಾಕಲು ಸಾಧ್ಯವಿಲ್ಲ. ಘೋಷಣೆಯಿಂದ ಜನ ವೋಟ್ ಹಾಕಲ್ಲ. ಮೂರು ವರ್ಷದಲ್ಲಿ ರಾಮನಗರಕ್ಕೆ ಬಿಜೆಪಿ ಕೊಡುಗೆ ಏನು? ಭಾಷಣ ಮಾಡುತ್ತಾರೆ ಅಷ್ಟೇ ಎಂದರು.

ಸಿದ್ದರಾಮಯ್ಯ ಕಾಲದಲ್ಲಿ ಚುನಾವಣೆ ಸಂದರ್ಭದಲ್ಲಿ ಬಹಳಷ್ಟು ಶಂಕುಸ್ಥಾಪನೆ ಆಗಿತ್ತು. ಆದರೆ ಅದು ಟೇಕಾಫ್ ಆದವಾ? ಅಂತಿಮವಾಗಿ ಅಲ್ಲಿ ರಾಮಮಂದಿರವನ್ನ ಕೂಡ ಕುಮಾರಸ್ವಾಮಿನೇ ಕಟ್ಟಬೇಕು. ಇವರ ಕೈಯಲ್ಲಿ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮೊದಲು ರಾಮನಗರದಲ್ಲಿ ಬಿಜೆಪಿ ಕಚೇರಿ ಕಟ್ಟಲಿ
ರಾಮ ಮಂದಿರ ವಿಚಾರವಾಗಿ ಸಚಿವ ಅಶ್ವತ್ಥ್ ನಾರಾಯಣ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಮಮಂದಿರವನ್ನಾದರೂ ಕಟ್ಟು, ಸೀತಾ ಮಂದಿರವನ್ನಾದರೂ ಕಟ್ಟು, ಅಶ್ವತ್ಥ ನಾರಾಯಣ, ಬಸವರಾಜ, ಬಿಎಸ್ ಯಡಿಯೂರಪ್ಪ ಮಂದಿರವಾದರೂ ಕಟ್ಟು. ಇದಕ್ಕೆ ನಮ್ಮ ಯಾವುದೇ ಅಭ್ಯಂತರ ಇಲ್ಲ. ಆದರೆ ಮೊದಲು ರಾಮನಗರದಲ್ಲಿ ಬಿಜೆಪಿ ಕಚೇರಿ ಕಟ್ಟಲಿ ಎಂದು ಸವಾಲು ಹಾಕಿದರು.

ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ನನಗೆ ನನ್ನ ಪಕ್ಷದ ಕಚೇರಿಯೇ ದೇವಸ್ಥಾನ ಇದ್ದಂತೆ. ರಾಮನಗರದಲ್ಲಿ ಏನೋ ಕ್ಲೀನ್ ಮಾಡುತ್ತೇನೆ ಅಂದ, ಏನು ಮಾಡಿದ್ದಾನೆ? ರಾಮನಗರದಕ್ಕೆ ಬಂದು ಮೊದಲು ವೃಷಭಾವತಿ ನೀರು ಕುಡಿಯಲಿ. ಕೊಚ್ಚೆ ನೀರನ್ನು ಸ್ವಚ್ಛಗೊಳಿಸಿದ್ದಾನಾ? ಭ್ರಷ್ಟಾಚಾರ ನಿಲ್ಲಿಸಿದ್ದಾನಾ? ಕೌಶಲ್ಯಾಭಿವೃದ್ಧಿ ಹಗರಣದ ಬಗ್ಗೆ ನಾನು ಇನ್ನೂ ಮಾತಾಡಿಲ್ಲ. ಶೀಘ್ರದಲ್ಲೇ ಕೌಶಲ್ಯಾಭಿವೃದ್ಧಿ ಹಗರಣದ ಬಿಚ್ಚಿಡುತ್ತೇನೆ ಎಂದರು.

ಮೊದಲು ಕಾಂಗ್ರೆಸ್ ಕಚೇರಿ ಯಾರ ಹೆಸರಲ್ಲಿವೆ ತಿಳಿದುಕೊಳ್ಳಲಿ: ಅಶ್ವತ್ಥನಾರಾಯಣ
ರಾಮನಗರದಲ್ಲಿ ಮೊದಲು ಬಿಜೆಪಿ ಕಚೇರಿ ಕಟ್ಟಲಿ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ, ಕಾಂಗ್ರೆಸ್ನವರಿಗೇ ರಾಜ್ಯದ ಸಾಕಷ್ಟು ಕಡೆ ಪಕ್ಷದ ಕಚೇರಿಗಳು ಇಲ್ಲ. ಮೊದಲು ಕಾಂಗ್ರೆಸ್ ಕಚೇರಿ ಯಾರ ಹೆಸರಲ್ಲಿವೆ ತಿಳಿದುಕೊಳ್ಳಲಿ ಎಂದರು. ನಾವು ಎಲ್ಲಾ ಕಡೆ ಪಕ್ಷದ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಡಿಕೆಶಿವಕುಮಾರ್ ಎಲ್ಲಿ ಇರುತ್ತಾರೆ ಅಂತ ನೋಡಿ, ಅಧಿಕಾರ ಕಳೆದುಕೊಂಡು ಡಿ.ಕೆ.ಶಿವಕುಮಾರ್ ಮನೆಯಲ್ಲಿರುತ್ತಾರೆ ಎಂದರು.

error: Content is protected !!