ಕೂಗು ನಿಮ್ಮದು ಧ್ವನಿ ನಮ್ಮದು

ರೈತರಿಗಾಗಿ ಭೂಸಿರಿ ನೂತನ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2023-24ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ರೈತರಿಗಾಗಿ ಭೂಸಿರಿ ಎಂಬ ನೂತನ ಯೋಜನೆಯನ್ನು ಬಜೆಟ್ನಲ್ಲಿ ಘೋಷಿಸಿದ್ದಾರೆ. ಈ ಯೋಜನೆ ಅಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ, 10,000 ರೂ. ಹೆಚ್ಚಿನ ಸಹಾಯಧನ ನೀಡಲು ಉದ್ದೇಶಿಸಲಾಗಿದೆ.

ಇದು ರೈತರು ಕ್ರಿಮಿನಾಶಕ, ರಸಗೊಬ್ಬರ, ಬೀಜ ಖರೀದಿಗೆ ಅನುಕೂಲಕರವಾಗಲಿದೆ. ರಾಜ್ಯ ಸರ್ಕಾರದ 2,500 ರೂ ಮತ್ತು ನಬಾರ್ಡ್ ಯೋಜನೆ ಅಡಿ ನೀಡುವ 2,500 ರೂ. ನೀಡಲಾಗುವುದು. ಇದು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ.

error: Content is protected !!