ಚಿಕ್ಕಬಳ್ಳಾಫುರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಚಿರತೆ ಬಲಿಯಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಕಣಿವೆ ಬಸವಣ್ಣ ದೇಗುಲ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಚಿರತೆ ಮರಿ ಮೃತಪಟ್ಟಿದೆ. ಚಿರತೆ ಮರಿಗೆ ವಾಹನ ಡಿಕ್ಕಿ ಹೊಡೆದಿದ್ದು ಘಟನೆ ಬಳಿಕ ಸ್ಥಳಕ್ಕೆ ಅಧಿಕಾರಿಗಳು ಬಂದು ಚಿರತೆ ಮರಿಯನ್ನು ಕಾಪಾಡಬೇಕಿತ್ತು.
ಆದ್ರೆ ಘಟನೆ ನಡೆದು ಎಷ್ಟೂ ಸಮಯ ಮೀರಿದರೂ ಅಧಿಕಾರಿಗಳೂ ಮಾತ್ರ ಪತ್ತೆ ಇಲ್ಲ. ಇದರಿಂದ ಅಪಘಾತದಲ್ಲಿ ಗಾಯಗೊಂಡಿದ್ದ ಮರಿ ಚಿರತೆ ಕೆಲ ಗಂಟೆಗಳ ಕಾಲ ನಡು ರಸ್ತೆಯಲ್ಲೇ ನರಳಾಡಿದೆ. ಒದ್ದಾಡಿ ಕೊನೆಗೆ ಪ್ರಾಣ ಬಿಟ್ಟಿದೆ. ಕೆಲಕಾಲ ನಡುರಸ್ತೆಯಲ್ಲೇ ಚಿರತೆ ಮರಿಯ ಕಳೇಬರಹ ಬಿದ್ದಿದ್ದು ಬಳಿಕ ಚಿರತೆ ಮರಿ ಕಳೇಬರಹವನ್ನು ಸವಾರರು ರಸ್ತೆ ಪಕ್ಕಕ್ಕೆ ಎಳೆದು ಹಾಕಿದ್ದಾರೆ. ಚಿರತೆ ಮರಿಗೆ ವಾಹನ ಡಿಕ್ಕಿಯಾದ್ರೂ ಸ್ಥಳಕ್ಕೆ ಬಾರದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.