ಕೂಗು ನಿಮ್ಮದು ಧ್ವನಿ ನಮ್ಮದು

ಜೊತೆಯಾಗಿ ತೆರೆ ಮೇಲೆ ಬರೋಕೆ ರೆಡಿಯಾಗಿದ್ದಾರೆ ರಿಯಲ್ ಲವ್ ಬರ್ಡ್ಸ್

ಕನ್ನಡ ಚಿತ್ರರಂಗದ ರಿಯಲ್ ಲವ್ ಬರ್ಡ್ಸ್ ಯಾರೂ ಅನ್ನುವುದು ಹೇಳೋದೇ ಬೇಡ. ಸೆಲೆಬ್ರಿಟಿ ದಂಪತಿಗಳಲ್ಲಿ ಆಗ ಪ್ರಿಯಾಂಕಾ-ಉಪ್ಪಿ ಇದ್ದರು. ಅವರಾದ್ಮೇಲೆ ರಾಧಿಕಾ ಪಂಡಿತ್-ರಾಕಿಂಗ್ ಸ್ಟಾರ್ ಯಶ್ ಲವ್ ಬರ್ಡ್ಸ್ ಅನಿಸಿಕೊಂಡರು.

ಮೊನ್ನೆ ಮೊನ್ನೆ ಈ ಒಂದು ಪಟ್ಟಿಗೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸೇರಿಕೊಂಡಿದ್ದಾರೆ. ಸದ್ಯಕ್ಕೆ ಲವ್ ಬರ್ಡ್ಸ್ ಎಂದು ಕರೆಸಿಕೊಳ್ಳುವಲ್ಲಿ ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಗಮನ ಸೆಳೆದಿದ್ದಾರೆ. ಒಂದಲ್ಲ ಎರಡಲ್ಲ ಪ್ರೀತಿ-ಪ್ರೇಮದ ಕಥೆಯ ಮೂರು ಸಿನಿಮಾಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ.

ಇವರ ಎರಡು ಸಿನಿಮಾಗಳು ಹಿಟ್ ಆಗಿವೆ. ಮೂರನೇ ಹಿಟ್ ನಿರೀಕ್ಷೆಯಲ್ಲಿ ಈ ಜೋಡಿ ಇದೆ. ಫೆಬ್ರವರಿ ತಿಂಗಳು “ಲವ್ ಬರ್ಡ್ಸ್” ಪ್ರೇಮಿಗಳ ತಿಂಗಳು ! ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರಿಗೆ ಫೆಬ್ರವರಿ ತಿಂಗಳು ತುಂಬಾ ವಿಶೇಷವಾದ ತಿಂಗಳೇ ಆಗಿದೆ. ಪ್ರೀತಿ-ಪ್ರೇಮ ಅಂತ ಇದೇ ತಿಂಗಳು ಒಂದಷ್ಟು ವರ್ಷ ಜೊತೆಗೆ ಓಡಾಡಿದರು. ಫೆಬ್ರವರಿ ತಿಂಗಳು ಬಂದಾಗ, ಯಾರಿಗೂ ತಿಳಿಯದ ರೀತಿ ಪ್ರೇಮಿಗಳ ದಿನವನ್ನೂ ಆಚರಿಸಿದರು.

error: Content is protected !!