ಕೂಗು ನಿಮ್ಮದು ಧ್ವನಿ ನಮ್ಮದು

ಐತಿಹಾಸಿಕ ಗರಗ ಮಡಿವಾಳೆಶ್ವರ ಮಠದ ಶ್ರೀಚನ್ನಬಸವ ಮಹಾಸ್ವಾಮಿಜಿ ಲಿಂಗೈಕ್ಯ

ಧಾರವಾಡ: ಗರಗದ ಐತಿಹಾಸಿಕ ಶ್ರೀಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಲಿಂಗೈಕ್ಯರಾಗಿದ್ದಾರೆ.

ಗರಗದ ಶ್ರೀ ಚನ್ನಬಸವ ಮಹಾಸ್ವಾಮೀಜಿ (89) ಕಳೆದ ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಠದಲ್ಲೇ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮಿಜಿ ಇಂದು ಇಹಲೋಕ ತ್ಯಜಿಸಿ, ಲಿಂಗೈಕ್ಯರಾಗಿದ್ದಾರೆ.

ಇದು ಧಾರವಾಡ ತಾಲೂಕಿನ ಗರಗದ ಪ್ರಸಿದ್ಧ ಮಠವಾಗಿದ್ದು, ಕಳೆದ 55 ವರ್ಷಗಳಿಂದ ಮಠದಲ್ಲಿ‌ದ್ದ ಶ್ರೀಗಳು ಅನಾರೋಗ್ಯದ ಹಿನ್ನೆಲೆ ನಿಧನ ಹೊಂದಿದ್ದಾರೆ.

ಇನ್ನು ಕಳೆದ ವಾರವಷ್ಟೇ ಗರಗದ ಮಡಿವಾಳೆಶ್ವರ ಮಠದ ಜಾತ್ರೆ ಅದ್ದೂರಿಯಾಗಿ ನಡೆದಿತ್ತು.

error: Content is protected !!