ಕೂಗು ನಿಮ್ಮದು ಧ್ವನಿ ನಮ್ಮದು

ಪರಿಮಳಕಷ್ಟೇ ಅಲ್ಲ, ಆರೋಗ್ಯಕ್ಕೂ ಬೇಕು ಕರಿಬೇವು

ಕರಿಬೇವಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ದೇಹವು ಆಹಾರದ ಪದಾರ್ಥದಲ್ಲಿರುವ ಕಬ್ಬಿಣದಂಶವನ್ನು ಹೀರಿಕೊಳ್ಳಲು ಸಹಾಯ ಮಾಡಿ ರಕ್ತಹೀನತೆಯನ್ನು ನಿವಾರಿಸುತ್ತದೆ. ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ. ಒಗ್ಗರಣೆಗೆ ಹಾಕಿದ ಕರಿಬೇವನ್ನು ತಿನ್ನದೆ ಬದಿಗೆ ಸರಿಸಿಡುವ ಅಭ್ಯಾಸ ಹೆಚ್ಚಿನವರಿಗಿರುತ್ತದೆ. ತಿನ್ನಿ ಎಂದರೆ ಅಯ್ಯೋ ಕಹಿ ಎನ್ನುವ ಉತ್ತರ ಬರುತ್ತದೆ. ಅಡುಗೆಗೆ ಪರಿಮಳ ನೀಡಲು ಕರಿಬೇವನ್ನು ಒಗ್ಗರಣೆಗಾಗಿ ಬಳಸುತ್ತೇವೆ ಎಂದುಕೊಂಡಿರುತ್ತೇವೆ. ಆದರೆ ಇದು ತಪ್ಪು. ಕರಿಬೇವಲ್ಲಿರುವ ಆರೋಗ್ಯಕಾರಿ ಗುಣಗಳನ್ನು ತಿಳಿದರೆ ನೀವು ಮತ್ತೆಂದಿಗೂ ಕರಿಬೇವನ್ನು ಬೀಸಾಡಲಾರಿರಿ.

ಕರಿಬೇವಿನಲ್ಲಿರುವ ಫೋಲಿಕ್ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ದೇಹವು ಆಹಾರದ ಪದಾರ್ಥದಲ್ಲಿರುವ ಕಬ್ಬಿಣದಂಶವನ್ನು ಹೀರಿಕೊಳ್ಳಲು ಸಹಾಯ ಮಾಡಿ ರಕ್ತಹೀನತೆಯನ್ನು ನಿವಾರಿಸುತ್ತದೆ. ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ.

ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಕರಿಬೇವು ತುಂಬಾ ಸಹಾಯ ಮಾಡುತ್ತದೆ. ಮಧುಮೇಹಿಗಳು ತಮ್ಮ ಆಹಾರಕ್ರಮದಲ್ಲಿ ಕರಿಬೇವನ್ನು ಸೇರಿಸುವುದು ಅತ್ಯುತ್ತಮ

ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ಮತ್ತು ನಾರಿನಂಶ ಇದ್ದು, ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ. ಆಯುರ್ವೇದದಲ್ಲೂ ಇದರ ಉಲ್ಲೇಖವಿದ್ದು ಇದು ದೇಹದಲ್ಲಿರುವ ಪಿತ್ತದ ಅಂಶವನ್ನು ಸಹ ಇದುಶಮನಗೊಳಿಸುತ್ತದೆ.

ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಕರಿಬೇವು ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವುದು, ಮೈ ತೂಕವೂ ಇಳಿಯುವುದು. ಕೂದಲಿನ ಆರೋಗ್ಯ ಕಾಪಾಡುವಲ್ಲಿ ಕರಿಬೇವು ಪ್ರಮುಖ ಪಾತ್ರವಹಿಸುತ್ತದೆ.

ಕರಿಬೇವಿನಲ್ಲಿ ಕಾರ್ಬಜೋಲ್ ಅಲ್ಕಾಲೋಯ್ಡ್ ಅಂಶವಿದ್ದು ಇದು ಅತಿಸಾರಕ್ಕೆ ಉತ್ತಮ ಮದ್ದಾಗಿದೆ.

error: Content is protected !!