ಕೂಗು ನಿಮ್ಮದು ಧ್ವನಿ ನಮ್ಮದು

ಮಾಲವ್ಯ ರಾಜಯೋಗ ಸೃಷ್ಟಿ ತುಂಬಲಿದೆ ಈ ರಾಶಿಯವರ ಖಜಾನೆ

ವೈದಿಕ ಜ್ಯೋತಿಷ್ಯದ ಪ್ರಕಾರ, ಫೆಬ್ರವರಿ 15, 2023 ರಂದು ಸಂಪತ್ತು-ಐಷಾರಾಮಿ, ಪ್ರೀತಿ-ಪ್ರಣಯಕಾರಕನಾದ ಶುಕ್ರನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಮಾಲವ್ಯ ಮಹಾಪುರುಷ ರಾಜಯೋಗ ಸೃಷ್ಟಿಯಾಗುತ್ತಿದ್ದು, ಮೂರು ರಾಶಿಯ ಜನರಗೆ ಅಪಾರ ಸಂಪತ್ತನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ.

ಶುಕ್ರ ಗೋಚರದಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ಸೃಷ್ಟಿ- ತುಂಬಲಿದೆ ಈ ರಾಶಿಯವರ ಖಜಾನೆ:
ಮಿಥುನ ರಾಶಿ:
ಮೀನ ರಾಶಿಯಲ್ಲಿ ರೂಪುಗೊಳ್ಳುತ್ತಿರುವ ಮಾಲವ್ಯ ಮಹಾಪುರುಷ ರಾಜಯೋಗದ ಪರಿಣಾಮವವಾಗಿ ಈ ರಾಶಿಯವರಿಗೆ ಅಪಾರ ಧನ ಪ್ರಾಪ್ತಿಯಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ಬಂಪರ್ ಲಾಭವಾಗುವ ಸಾಧ್ಯತೆ ಇದ್ದು, ಆರ್ಥಿಕವಾಗಿ ಬಲಗೊಳ್ಳುವಿರಿ.

ಕನ್ಯಾ ರಾಶಿ:
ಶುಕ್ರ ರಾಶಿ ಪರಿವರ್ತನೆಯಿಂದ ರೂಪುಗೊಳ್ಳಲಿರುವ ಮಾಲವ್ಯ ರಾಜಯೋಗವು ಕನ್ಯಾ ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ. ಈ ಸಮಯದಲ್ಲಿ ವಿತ್ತೀಯ ಲಾಭದೊಂದಿಗೆ ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗಲಿದೆ. ವಿದೇಶ ಪ್ರವಾಸಕ್ಕೆ ಹೋಗುವ ನಿಮ್ಮ ಬಹುದಿನದ ಕನಸು ನನಸಾಗಲಿದೆ.

ಧನು ರಾಶಿ:
ಮಾಲವ್ಯ ಮಹಾಪುರುಷ ರಾಜಯೋಗವು ಧನು ರಾಶಿಯವರ ಜೀವನವನ್ನು ಬೆಳಗಿಸಲಿದೆ. ಈ ಸಮಯದಲ್ಲಿ ಹೊಸ ಮನೆ, ವಾಹನ ಖರೀದಿಸುವ ಯೋಗವೂ ಇದೆ. ರಾಜಕೀಯ ರಂಗದಲ್ಲಿರುವವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ಸುವರ್ಣ ಸಮಯ ಎಂದೇ ಹೇಳಬಹುದು.

error: Content is protected !!